ನೀಲಿ ಚಿತ್ರದ ರಾಣಿ ಸನ್ನಿ ಲಿಯೋನ್ ಬಾಲಿವುಡ್ ಗೆ ಕಾಲಿಟ್ಟ ನಂತರ ಆಕೆಯ ಹಾಟ್ ಇಮೇಜ್ ಬಳಸಿಕೊಂಡು ಹಣಗಳಿಸುತ್ತಿರುವ ನಿರ್ಮಾಪಕರಿಗೆ ಶಾಕ್ ಎನಿಸುವ ಸುದ್ದಿಯೊಂದು ಬಂದಿದೆ. ಅರೆ, ಅದೇನು ಅಂತೀರಾ..? ಹಾಗಿದ್ದರೆ ಈ ಸ್ಟೋರಿ ಓದಿ.
ಹೌದು. ಬಾಲಿವುಡ್ ನಲ್ಲಿ ಸನ್ನಿ ಕಾಲಿಡುತ್ತಿದ್ದಂತೆ ನಿರ್ಮಾಪಕರು ತಾಮುಂದು ತಾಮುಂದು ಎಂದು ಮುಗಿಬಿದ್ದರು. ಇನ್ನು ನಿರ್ದೇಶಕರಂತೂ ಆಕೆಯ ದೇಹದ ಮೇಲೆ ಎಷ್ಟು ಬಟ್ಟೆ ಉಳಿಸಬಹುದು ಎಂಬ ಲೆಕ್ಕಾಚಾರದಲ್ಲಿಯೇ ಚಿತ್ರ ನಿರ್ಮಿಸಿದರು. ಆದರೆ ಇದೀಗ ಮನಸೋ ಇಚ್ಛೆ ಸನ್ನಿಯ ಬಟ್ಟೆ ಬಿಚ್ಚಿಸಿದ ಮಸ್ತಿಜಾದೆ ಚಿತ್ರ ತಂಡಕ್ಕೆ ಹೊಸ ತಲೆ ನೋವು ಪ್ರಾರಂಭವಾಗಿದೆ.
ಮಸ್ತಿಜಾದೆಯಲ್ಲಿ ಸನ್ನಿಯ ದೇಹ ಪ್ರದರ್ಶನ ಹಾಗೂ ಹಾಟ್ ಲುಕ್ ನೋಡಿದ ಸೆನ್ಸಾರ್ ಮಂಡಳಿ ಬೆಚ್ಚಿ ಬಿದ್ದಿದ್ದು ಯಾವುದೇ ಕಾರಣಕ್ಕೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದಿದೆ. ಅಷ್ಟೇ ಅಲ್ಲ, ಒಂದೊಮ್ಮೆ ಚಿತ್ರಕ್ಕೆ ಅನುಮತಿ ನೀಡ ಬೇಕಾದಲ್ಲಿ ಆಕೆಯ ಹಸಿಬಿಸಿ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಖಡಕ್ ಸೂಚನೆ ನೀಡಿದೆ.
ಹಾಗಾಗಿ ಈಗಾಗಲೇ ಎರಡೆರಡು ಭಾರಿ ಸೆನ್ಸಾರ್ ಮಂಡಳಿಯ ಮೆಟ್ಟಿಲೇರಿ ಸುಸ್ತಾಗಿರುವ ಚಿತ್ರ ತಂಡ ಸನ್ನಿಯ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ನಡೆಸಲು ಅನಿವಾರ್ಯವಾಗಿ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.