ಮನೋರಂಜನೆ

ಖುಷಿ ತಡೆಯಲಾರದೆ ಕುಣಿಯುತ್ತಿದ್ದಾರಂತೆ ಶಾರೂಕ್ !

Pinterest LinkedIn Tumblr

813227trini-winಬಾಲಿವುಡ್ ನಟ ಶಾರೂಕ್ ಖಾನ್ ಅವರಿಗೆ ಹೇಳತೀರದಷ್ಟು ಸಂತಸವಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ‘ದಿಲ್ ವಾಲೇ’ ಚಿತ್ರದ ಚಿತ್ರೀಕರಣಕ್ಕಾಗಿ ಸದ್ಯ ಬಲ್ಗೇರಿಯಾದಲ್ಲಿರುವ ಶಾರೂಕ್, ಖುಷಿ ತಡೆಯಲಾರದೆ ಹೋಟೆಲ್ ರೂಮಿನಲ್ಲೇ ಕುಣಿದು ಕುಪ್ಪಳಿಸಿದ್ದಾರೆ. ಅದಕ್ಕೇನು ಕಾರಣ ಅಂತೀರಾ ಈ ಸ್ಟೋರಿ ಓದಿ.

ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕತ್ವ ಹೊಂದಿದ್ದ ಶಾರೂಕ್ ಖಾನ್, ಕೆಲ ತಿಂಗಳುಗಳ ಹಿಂದಷ್ಟೇ ತಮ್ಮ ಸಹ ಪಾಲುದಾರರಾಗಿದ್ದ ನಟಿ ಜೂಹಿ ಚಾವ್ಲಾ ಹಾಗೂ ಆಕೆಯ ಪತಿ ಜಯ್ ಮೆಹ್ತಾ ಜೊತೆ ಸೇರಿ ಕೆರೆಬಿಯನ್ ಪ್ರಿಮೀಯರ್ ಲೀಗ್ ಟಿ20 ಗೂ ಕಾಲಿಟ್ಟಿದ್ದರು.

ಜೂಹಿ ಹಾಗೂ ಜಯ್ ಮೆಹ್ತಾ ಜೊತೆ ಸೇರಿ ಶಾರೂಕ್, ಟ್ರೆನಿಡಾಡ್ ಅಂಡ್ ಟೊಬ್ಯಾಗೋ ತಂಡವನ್ನು ಖರೀದಿಸಿದ್ದರು. ಭಾನುವಾರ ನಡೆದ ಪಂದ್ಯದಲ್ಲಿ ಶಾರೂಕ್ ಮಾಲೀಕತ್ವದ ತಂಡ ಬಾರ್ಬಡೋಸ್ ಟ್ರೈಡೆಂಟ್ ತಂಡವನ್ನು ಮಣಿಸಿ ಕೆರೆಬಿಯನ್ ಪ್ರಿಮಿಯರ್ ಲೀಗ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತಮ್ಮ ತಂಡ ಗೆಲ್ಲುತ್ತಿದ್ದಂತೆಯೇ ಸಂತಸ ತಡೆಯಲಾಗದ ಶಾರೂಕ್ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಾವು ಅಲ್ಲಿರದಿದ್ದಕ್ಕೆ ಶಾರೂಕ್ ಗೆ ಶ್ಯಾನೆ ಬೇಜಾರು ಸಹ ಆಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಟ್ರೆನಿಡಾಡ್ ಅಂಡ್ ಟೊಬ್ಯಾಗೋ ತಂಡಗಳ ಗೆಲುವಿನಿಂದ ಎರಡು ಟ್ರೋಫಿ ಗಿಟ್ಟಿಸಿರುವ ಶಾರೂಕ್ ತಮ್ಮ ಮೂವರು ಮಕ್ಕಳಿಗೆ ನೀಡಲು ಇನ್ನೊಂದು ಟ್ರೋಫಿ ಬಾಕಿಯಿದೆ ಎಂದು ಟ್ವೀಟ್ ಮಾಡಿದ್ದಾರೆ.

Write A Comment