ಮನೋರಂಜನೆ

‘ಭಜರಂಗಿ ಭಾಯಿಜಾನ್’ ಗಳಿಸಿದ ಹಣವೆಷ್ಟು ಗೊತ್ತಾ ..?; ಹತ್ತೇ ದಿನಗಳಲ್ಲಿ 291.87 ಕೋಟಿ

Pinterest LinkedIn Tumblr

7867Bajrangi-bhaijaan-poster-story-collection‘ಬಾಹುಬಲಿ’ಯ ಅಬ್ಬರದ ನಡುವೆಯೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆದಿದ್ದು ಆ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದೆ.

ಬಿಡುಗಡೆಗೊಂಡ ದಿನದಿಂದಲೇ ಗೆಲುವಿನತ್ತ ಸಾಗುತ್ತಿರುವ ಭಜರಂಗಿ ಭಾಯಿಜಾನ್ ಈ ಭಾನುವಾರ 24.05 ಕೋಟಿ ಗಳಿಸುವ ಮೂಲಕ ತನ್ನ ಟ್ರೆಂಡ್ ಕಡಿಮೆಯಾಗಿಲ್ಲ ಎಂದು ತೋರಿಸಿಕೊಟ್ಟಿದ್ದು ಒಟ್ಟಾರೆ ಹತ್ತೇ ದಿನಗಳಲ್ಲಿ ಬರೋಬ್ಬರಿ 240.72 ಕೋಟಿ ಆದಾಯವನ್ನು ಭಾರತದಲ್ಲಿ ಗಳಿಸಿದರೆ ವಿದೇಶದಲ್ಲಿಯೂ 51.15 ಕೋಟಿ ರೂಪಾಯಿಗಳನ್ನು ಗಳಿಸಿ 291.87 ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದೆ.

ಅಷ್ಟೇ ಅಲ್ಲ, ಈ ಮೂಲಕ ಬಾಲಿವುಡ್​ನಲ್ಲಿ 200 ಕೋಟಿ ಕ್ಲಬ್​ಗೆ ಸೇರಿರುವ ಹೀರೋಗಳ ಯಾದಿಯಲ್ಲಿ 2ನೇ ಸ್ಥಾನಕ್ಕೆ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ರನ್ನು ಕರೆದೊಯ್ದಿರುವುದು ಗಮನಾರ್ಹ ಸಂಗತಿ.

ಏನೇ ಇರಲಿ, ತಮ್ಮ ಹೇಳಿಕೆಗಳಿಂದ ಸಲ್ಮಾನ್ ಖಾನ್ ವಿವಾದ ಸೃಷ್ಟಿಸುತ್ತಿದ್ದರೂ ಜನರು ಮಾತ್ರ ಅವರ ಚಿತ್ರ ನೋಡಲು ಲಗ್ಗೆ ಇಡುತ್ತಿರುವುದು ನಿಜಕ್ಕೂ ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ ಎಂಬುದು ಅಪ್ಪಟ ಸತ್ಯ.

Write A Comment