ಮನೋರಂಜನೆ

ಜುರಾಸಿಕ್ ವರ್ಲ್ಡ್ ನ ಮುಂದಿನ ಭಾಗದ ರಿಲೀಸ್ ಯಾವಾಗ ಗೊತ್ತಾ…?

Pinterest LinkedIn Tumblr

1063movies-jurassic-park-2-3ಕಾಲಿನ್ ಟ್ರವೆರೋ ನಿರ್ದೇಶನದ ‘ಜುರಾಸಿಕ್ ವರ್ಲ್ಡ್’ ಜಗತ್ತಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲಿಯೂ ಸಿನಿಮಾ ಇತಿಹಾಸದಲ್ಲಿಯೇ ಮೂರನೇ ಗಳಿಕೆಯ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿರುವ ಈ ಚಿತ್ರದ ಮುಂದಿನ ಭಾಗದ ನಿರ್ಮಾಣವೂ ಸಹ ಸಾಗುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಈಗಾಗಲೇ ಹತ್ತು ಸಾವಿರ ಕೋಟಿಗೂ ಅಧಿಕ ಹಣವನ್ನು ಗಳಿಸಿರುವ ಜುರಾಸಿಕ್ ವರ್ಲ್ಡ್  ನ ಮುಂದಿನ ಅವತರಣಿಕೆ 2018ರ ಜೂನ್ 22ರಂದು ತೆರೆಗೆ ಬರಲಿದೆಯಂತೆ. ಈಗಾಗಲೇ ಇದಕ್ಕಾಗಿ ಸಾಕಷ್ಟು ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ನಿರ್ದೇಶಕ ಟ್ರವೆರೋ ಈಗಾಗಲೇ ಚಿತ್ರಕಥೆ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಸಹ ಇದೇ ಕಲಾವಿದರೇ ಇರಲಿದ್ದು ಕೆಲ ಹೊಸ ಮುಖಗಳ ಪರಿಚಯವೂ ಆಗಲಿದೆ ಎನ್ನಲಾಗುತ್ತಿದೆ.

ಅಂದ ಹಾಗೆ ಈ ಜುರಾಸಿಕ್ ವರ್ಲ್ಡ್ ನಲ್ಲಿದ್ದ ಕ್ರಿಸ್ ಪ್ರಾಟ್ ಮತ್ತು ಬ್ರೖೆಸ್ ಡಾಲಸ್ ಹಾವರ್ಡ್ ಮತ್ತೆ ದೈತ್ಯ ಡೈನೋಸಾರ್​ಗಳ ಜೊತೆ ಕಾದಾಡಲಿದ್ದು ಈ ಚಿತ್ರಕ್ಕೆ ಯೂನಿವರ್ಸಲ್ ಸ್ಟುಡಿಯೋಸ್ ಮತ್ತು ಲೆಜೆಂಡರಿ ಪಿಕ್ಚರ್ಸ್ ಹಣ ಹೂಡಲು ಈಗಾಗಲೇ ಮುಂದೆ ಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment