ಮನೋರಂಜನೆ

ಸೆ.15 ರಿಂದ ಬಾಹುಬಲಿ-2 ರ ಚಿತ್ರೀಕರಣ ಪ್ರಾರಂಭ

Pinterest LinkedIn Tumblr

bahu

ಚೆನ್ನೈ: ಬಾಹುಬಲಿ-2 ಚಿತ್ರದ ಚಿತ್ರೀಕರಣ ಸೆ.15 ರಿಂದ ಪ್ರಾರಂಭವಾಗಲಿದೆ ಎಂದು ನಾಯಕ ನಟ ಪ್ರಭಾಸ್ ತಿಳಿಸಿದ್ದಾರೆ.

ಶಿವುಡು ಪಾತ್ರದಲ್ಲಿ ನಟಿಸಿರುವ ಪ್ರಭಾಸ್, ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದರ ಬಗ್ಗೆ 2 ನೇ ಭಾಗದ ಚಿತ್ರ ಕಥೆ ಸಾಗುತ್ತದೆ. ಪ್ರಸ್ತುತ ಬಾಹುಬಲಿ ಚಿತ್ರ ತಂಡದ ಬಹುತೇಕ ಸದಸ್ಯರು ರಜಾದಿನಗಳನ್ನು ಕಳೆಯುತ್ತಿದ್ದು ಸೆ.15 ರ ನಂತರ ಎಲ್ಲರೂ ವಾಪಸ್ಸಾಗಲಿದ್ದು ಬಾಹುಬಲಿ-2 ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಪ್ರಭಾಸ್ ಹೇಳಿದ್ದಾರೆ.

ಶೇ.40 ರಷ್ಟು ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ನಾಯಕ ಸೇರಿದಂತೆ ಪ್ರಮುಖ ಪಾತ್ರಗಳು ಬರುವ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಯುದ್ಧ ಸನ್ನಿವೇಶ ಹಾಗೂ ಇತರ ದೃಶ್ಯಗಳನ್ನು ಚಿತ್ರಿಸುವುದು ಮಾತ್ರವೇ ಬಾಕಿ ಇದೆ. ಎರಡನೇ ಭಾಗದಲ್ಲಿ ರಾಣ ದಗ್ಗುಭಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಜುಲೈ.10 ರಂದು ಬಿಡುಗಡೆಗೊಂಡಿರುವ ಬಾಹುಬಲಿ ಚಿತ್ರ 350 ಕೋಟಿ ಗೂ ಹೆಚ್ಚು ಗಳಿಕೆ ಮಾಡಿರುವ ಕ್ಲಬ್ ಗೆ ಸೇರ್ಪಡೆಯಾಗಿದೆ. ಬಾಹುಬಲಿ-2 ನ್ನು ವೀಕ್ಷಿಸಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Write A Comment