ಮನೋರಂಜನೆ

33ರ ಹರೆಯಕ್ಕೆ ಕಾಲಿಟ್ಟ ಪ್ರಿಯಾಂಕಾ

Pinterest LinkedIn Tumblr

priyanka

ನಟಿ ಪ್ರಿಯಾಂಕಾ ಚೋಪ್ರಾ ಅವರೀಗ ಸಂಭ್ರಮದಲ್ಲಿದ್ದಾರೆ. ಕಾರಣ, ನಿನ್ನೆಯಷ್ಟೇ (ಜು.18) 33ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯಲ್ಲೇ ಪ್ರಿಯಾಂಕಾ ತಾಯಿ ಅಚ್ಚರಿಯೊಂದನ್ನು ನೀಡಿದ್ದಾರೆ. ಶೂಟಿಂಗ್​ನಲ್ಲಿದ್ದ ಪಿಗ್ಗಿ ವಾಪಾಸಾಗುವುದರೊಳಗೆ ಮನೆ ತುಂಬ ಬಂಧು ಮಿತ್ರರಿರುವಂತೆ ವ್ಯವಸ್ಥೆ ಮಾಡಿದ್ದಾರೆ. ಮಗಳಿಗೆ ವಿಶೇಷ ಔತಣ ನೀಡಬೇಕೆನ್ನುವ ಉದ್ದೇಶದಿಂದಲೇ ಅವರ ತಾಯಿ ಮಧು ಈ ಥರದ್ದೊಂದು ಪ್ಲಾನ್ ಮಾಡಿದ್ದರು.

ಇದರಿಂದ ಖುಷಿಯಾದ ಪ್ರಿಯಾಂಕಾ, ‘ನನ್ನ ಹುಟ್ಟುಹಬ್ಬವನ್ನು ಅಮ್ಮ ವಿಶೇಷವಾಗಿ ಆಯೋಜಿಸಿದ್ದರು. ಆದರೆ ನನಗೆ ಇದರ ಬಗ್ಗೆ ಯಾವುದೇ ಸುಳಿವಿರಲಿಲ್ಲ. ನನ್ನ ಎಲ್ಲ ಬಂಧುಗಳು, ಫ್ರೆಂಡ್ಸ್ ಬಂದಿದ್ದರು. ನನಗೀಗ ಅತೀವ ಸಂತಸವಾಗುತ್ತಿದೆ’ ಎಂದಿದ್ದಾರೆ. ಪ್ರಮುಖರಿಗಷ್ಟೇ ಆಹ್ವಾನವಿದ್ದ ಈ ಔತಣಕೂತದಲ್ಲಿ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ, ವಿಶಾಲ್ ಭಾರದ್ವಾಜ್, ಅನುರಾಗ್ ಕಶ್ಯಪ್, ವಿಕಾಸ್ ಬಾಹ್ಲ್, ನಟ ರಿತೇಶ್ ದೇಶ್​ವುುಖ್, ಜೆನಿಲಿಯಾ, ಕಂಗನಾ ರಣೌತ್, ರಣವೀರ್ ಸಿಂಗ್ ಮುಂತಾದ ಬಾಲಿವುಡ್ ನಟರು ಪ್ರಿಯಾಂಕಾಗೆ ವಿಶ್ ಮಾಡಿದರು. ಸದ್ಯ ‘ಬಾಜಿರಾವ್ ಮಸ್ತಾನಿ’ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿರುವ ಅವರು, ‘ಗಂಗಾಜಲ್ 2’ನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣವೂ ಭರದಿಂದ ಸಾಗುತ್ತಿದೆ. ಇದರ ಮಧ್ಯೆ ಅಮೆರಿಕದ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುವ ‘ಕ್ವಾಂಟಿಕೋ’ ಧಾರಾವಾಹಿಯಲ್ಲೂ ಪಿಗ್ಗಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ, ಪ್ರಿಯಾಂಕಾ ಹೊಸ ಮನೆ ಕೊಂಡುಕೊಂಡಿದ್ದಾರೆ. ಶೀಘ್ರದಲ್ಲೇ ಅಲ್ಲಿಗೆ ಸ್ಥಳಾಂತರವಾಗಲಿದ್ದಾರೆ.

Write A Comment