ಮನೋರಂಜನೆ

ನಾನು ನಮ್ಮಪ್ಪನ ಫ್ಯಾನು ಅಂತಾರೇ ಶೃತಿ ಹಾಸನ್

Pinterest LinkedIn Tumblr

33882015_07_17_00_58_11_Shruti-Haasan-Imageದಕ್ಷಿಣ ಭಾರತದ ಚಿತ್ರಗಳ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿ ಇದೀಗ ಬಾಲಿವುಡ್ ನಲ್ಲೂ ಮಿಂಚುತ್ತಿರುವ ಖ್ಯಾತ ನಟ ಕಮಲ ಹಾಸನ್ ಪುತ್ರಿ ಶೃತಿ ಹಾಸನ್, ನನ್ನ ಅಪ್ಪ ಅದ್ಬುತ ಕಲಾವಿದರು. ಹಾಗಾಗಿ ನಾನು ಅವರ ದೊಡ್ಡ ಫ್ಯಾನ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಜೊತೆ ಅಭಿನಯಿಸಿದ ‘ಗಬ್ಬರ್ ಈಸ್ ಬ್ಯಾಕ್’ ಚಿತ್ರ ಭರ್ಜರಿ ಯಶಸ್ಸು ಗಳಿಸುತ್ತಿದ್ದಂತೆಯೇ ಬಾಲಿವುಡ್ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಶೃತಿ ಹಾಸನ್, ತಮ್ಮ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಅತ್ಮೀಯ ಸ್ನೇಹಿತರು ಹಾಗೂ ಸಹೋದ್ಯೋಗಿಗಳಾಗಿ ತಮ್ಮ ತಂದೆ ಕಮಲ್ ಅಭಿನಯದ ‘ಪಾಪನಾಸಂ’ ಚಿತ್ರದ ಸ್ಪೆಷಲ್ ಷೋ ಒಂದನ್ನು ಮುಂಬೈನಲ್ಲಿ ಏರ್ಪಡಿಸಿದ್ದಾರೆ.

ಕಾಲಿವುಡ್, ಟಾಲಿವುಡ್ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದ ಶೃತಿ ಹಾಸನ್ ಗಾಯಕಿಯಾಗಿಯೂ ಹೆಸರು ಗಳಿಸಿದ್ದಾರೆ. ತಾರಾ ದಂಪತಿಗಳಾದ ಕಮಲ್ ಹಾಸನ್, ಸಾರಿಕಾ ಪುತ್ರಿಯಾಗಿರುವ ಶೃತಿ ಹಾಸನ್ ಬಾಲಿವುಡ್ ಚಿತ್ರಗಳ ಜೊತೆ ಜೊತೆಗೆ ದಕ್ಷಿಣ ಭಾರತೀಯ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದು, ಇವರ ಬಳಿ ಈಗ ಒಟ್ಟು ಆರು ಚಿತ್ರಗಳಿವೆ. ಶೃತಿ ಹಾಸನ್ ಸಹೋದರಿ ಅಕ್ಷರಾ ಹಾಸನ್ ಕೂಡಾ ಈಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Write A Comment