ಮನೋರಂಜನೆ

ಹುಡುಗಿ ಎದುರು ಬೆತ್ತಲಾಗಿ ನಿಂತ ದೈಹಿಕ ತರಬೇತುದಾರ !!

Pinterest LinkedIn Tumblr

4222015-07-16_new_11189454_I2ನೇಪಾಳ ಕ್ರಿಕೆಟ್ ತಂಡದಲ್ಲಿ ದೈಹಿಕ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಫಿಸಿಯೋಥೆರಪಿಸ್ಟ್ ಒಬ್ಬ ಮಸಾಜ್ ಸೆಂಟರಿನಲ್ಲಿ ಬೆತ್ತಲಾಗಿ ನಿಂತು ಜೈಲು ಸೇರಿದ ಘಟನೆ ನಡೆದಿದೆ.

ಹೌದು. ಪ್ರಸಿದ್ದ ಫಿಸಿಯೋಥೆರಪಿಸ್ಟ್ ಎಂದೇ ಹೆಸರು ಗಳಿಸಿರುವ  ಡಾ. ಏಜಾಜ್ ಬಷೀರ್ ಅಶಾಯ್ ಎಂಬುವವರು ಇತ್ತೀಚೆಗಷ್ಟೇ ನೇಪಾಳ ಕ್ರಿಕೆಟ್ ತಂಡದ ಫಿಸಿಯೋ ಆಗಿ ನೇಮಕಗೊಂಡಿದ್ದರು. ವಿಶ್ವ ಟಿ20 ಕ್ವಾಲಿಫಯರ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ನೇಪಾಳ ತಂಡ ಐರ್ಲೆಂಡ್’ನಲ್ಲಿ ಕೆಲ ಪಂದ್ಯಗಳನ್ನ ಆಡುತ್ತಿದೆ. ಈ ಹಿನ್ನೆಲೆಯಲ್ಲಿ ತಂಡದ ಜೊತೆ ಬಷೀರ್ ಐರ್ಲೆಂಡ್’ಗೆ ಹೋಗಿದ್ದ ಬಷೀರ್ ಉಳಿದುಕೊಂಡಿದ್ದ ಹೋಟೆಲ್ ನ ಮಸಾಜ್ ಸೆಂಟರ್ ಗೆ ತೆರಳಿದ್ದರು.

ಅಷ್ಟೇ ಅಲ್ಲ,  ಏಜಾಜ್ ಬಷೀರ್ ಅಶಾಯ್ ಅವರು ಫುಲ್ ಬಾಡಿ ಮಸಾಜ್ ಸೇವೆಯನ್ನ ಬುಕ್ ಮಾಡಿದ್ದು ಆ ಹೋಟೆಲ್ ನಿಯಮದ ಪ್ರಕಾರ, ಈ ಬಾಡಿ ಮಸಾಜ್ ಮಾಡಿಸಿಕೊಳ್ಳುವವರು ಅಂಡರ್ ವೇರ್ ಹಾಕಬೇಕು. ಆದರೆ, ಬಷೀರ್ ಸಂಪೂರ್ಣ ನಗ್ನರಾಗಿ ಹೋಗಿದ್ದಾರೆ ಎನ್ನಲಾಗಿದ್ದು ಇವರನ್ನು ನೋಡಿ ಶಾಕ್ ಆದ ಮಸಾಜ್ ಮಾಡುವ ಹುಡುಗಿ ಓಡಿ ಹೋಗಿದ್ದು ತನ್ನ ಜತೆಗೆ ಬಷೀರ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಬಷೀರ್ ಅವರು ಕ್ಷಮೆ ಕೇಳಿದರೂ ಸಹ ಐರ್ಲೆಂಡ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದೀಗ  2,500 ಪೌಂಡ್ ತೆತ್ತು ಜಾಮೀನಿನ ಮೇಲೆ ಹೊರಬಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಂದಿನ ವಿಚಾರಣೆ ಆಗಸ್ಟ್ 12ರಂದು ವಿಚಾರಣೆ ನಡೆಯಲಿದ್ದು ಈ ನಡುವೆ  ಬಷೀರ್ ಅವರನ್ನು ಫಿಸಿಯೋ ಹುದ್ದೆಯಿಂದ ವಜಾ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment