ಮನೋರಂಜನೆ

ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ 10 ಚಿತ್ರಗಳ ಪೈಕಿ ಸ್ಥಾನ ಗಳಿಸಿದ ‘ಬಾಹುಬಲಿ’

Pinterest LinkedIn Tumblr

bahubaliವಾಷಿಂಗ್ಟನ್: ಈಗ ಎಲ್ಲೆಲ್ಲೂ ಬಾಹುಬಲಿಯದ್ದೇ ಜಪ. ಖ್ಯಾತ ತೆಲುಗು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ   ಚಿತ್ರ ‘ಬಾಹುಬಲಿ’ಯು ವಿದೇಶಗಳಲ್ಲಿಯೂ ಹೆಸರು ಮಾಡುತ್ತಿರುವುದು ಹಳೆ ಸುದ್ದಿ.

ಹೊಸ ವಿಷಯವೇನೆಂದರೆ ಬಿಡುಗಡೆಗೊಂಡ ಮೂರೇ ದಿನಗಳಲ್ಲಿ ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಪ್ರಮುಖ 10 ಚಿತ್ರಗಳ ಪೈಕಿ ಸ್ಥಾನ ಅಲಂಕರಿಸಿದ್ದು, ಇದುವರೆಗೆ 20 ಮಿಲಿಯನ್ ಡಾಲರ್ ಹಣ ಗಳಿಸಿದೆ.

ತೆಲುಗು ನಟ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ವಿಶ್ವಾದ್ಯಂತ 4 ಸಾವಿರದ 200 ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿದೆ. ಅದು  ಬಿಡುಗಡೆಯಾದ ಎರಡೇ ದಿನಗಳಲ್ಲಿ 100 ಕೋಟಿಗೂ ಮೀರಿ ಹಣ ಗಳಿಸಿದ್ದು ಚಿತ್ರದ ಹೆಗ್ಗಳಿಕೆ. ಭಾರತದಲ್ಲಿ ಮೊನ್ನೆ ಶುಕ್ರವಾರದಿಂದ ನಿನ್ನೆ ಭಾನುವಾರದವರೆಗೆ 21.3 ಮಿಲಿಯನ್ ಡಾಲರ್ ಹಣ ಸಂಪಾದನೆ ಮಾಡಿದೆ.

ಫ್ರೆಂಚ್ ನಿರ್ದೇಶಕ ಪಿಯರ್ರೆ ಕಾಫಿನ್ಸ್ ಅವರ ಆನಿಮೇಟೆಡ್ ಚಿತ್ರ ‘ ಮಿನಿಯನ್ಸ್’ ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್ ನಲ್ಲಿ 124 ಮಿಲಿಯನ್ ಡಾಲರ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಅರ್ನಾಲ್ಡ್ ಸ್ವೇಜ್ ನಗರ್ ಅವರ ಅಭಿನಯದ ಟರ್ಮಿನೇಟರ್ ಜೆನಿಸಿಸ್ ಚಿತ್ರ 47 ಮಿಲಿಯನ್ ಡಾಲರ್ ಗಳಿಸಿ  ಎರಡನೇ ಸ್ಥಾನದಲ್ಲಿದೆ ಎಂದು ಡೆಡ್ ಲೈನ್.ಕಾಂ ವೆಬ್ ಸೈಟ್ ವರದಿ ಮಾಡಿದೆ.

ಪೌಲ್ ರುಡ್ಡ್ ಅಭಿನಯದ ಚಿತ್ರ ‘ಆಂಟ್ ಮ್ಯಾನ್’ ಇದೇ ತಿಂಗಳ 29ರಂದು ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ ನಲ್ಲಿ ಮುಂದಿನ ಹಿಟ್ ಲಿಸ್ಟ್ ಗೆ ಸೇರಿಕೊಳ್ಳಲಿರುವ ಚಿತ್ರವಾಗಲಿದೆ ಎಂದು ಸಿನಿಮಾ ಪ್ರೇಮಿಗಳು ಭಾವಿಸಿದ್ದಾರೆ.

Write A Comment