ಮನೋರಂಜನೆ

ಮೂರನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ; ಸರಣಿ ಕ್ಲೀನ್ ಸ್ವೀಪ್

Pinterest LinkedIn Tumblr

india

ಹರಾರೆ: ಜಿಂಬಾಬ್ವೆ ಮತ್ತು ಭಾರತದ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 83 ರನ್‌ಗಳಿಂದ ಜಯ ಗಳಿಸಿದ್ದು, ಸರಣಿಯ ಮೂರು ಪಂದ್ಯಗಳನ್ನು ಗೆದ್ದು, ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಭಾರತಕ್ಕೆ ಬ್ಯಾಟಿಂಗ್ ಮಾಡಲು ಜಿಂಬಾಬ್ವೆ ಅವಕಾಶ ಮಾಡಿಕೊಟ್ಟಿತ್ತು. ಐದು ವಿಕೆಟ್ ನಷ್ಟಕ್ಕೆ ನಿಗದಿತ ಓವರ್‌ಗಳಲ್ಲಿ ಭಾರತ 275 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. 276 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ 42.4 ಓವರ್‌ಗಳಲ್ಲಿ, 193 ರನ್ ಗಳಿಸಿ, ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು, ಭಾರತಕ್ಕೆ ಶರಣಾಯಿತು.

ಕನ್ನಡಿಗ ಸ್ಟುವರ್ಟ್ ಬಿನ್ನಿಯ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಜಿಂಬಾಬ್ವೆಯ ಮೂರು ವಿಕೆಟ್‌ಗಳು ಉರುಳಿದ್ದು, 10 ಓವರ್‌ಗಳಲ್ಲಿ ಕೇವಲ 55 ರನ್ ನೀಡಿದರು. ಜತೆಗೆ 10 ಓವರ್‌ಗಳಲ್ಲಿ ಎರಡು ವಿಕೆಟ್ ಪಡೆದ ಹರಭಜನ್ ‌ಸಿಂಗ್ ಕೇವಲ 35 ರನ್‌ಗಳನ್ನು ನೀಡಿದ್ದು, ಜಿಂಬಾಬ್ವೆಯ ಕಳಪೆ ಪ್ರದರ್ಶನಕ್ಕೆ ಕಾರಣರಾದರು. ವಿಕೆಟ್ ಪಡೆಯುವಲ್ಲಿ ವಿಫಲರಾದರೂ, ಭುವನೇಶ್ವರ ಕುಮಾರ್ ಆರು ಓವರ್‌ಗಳಲ್ಲಿ ಕೇವಲ 12 ರನ್ ನೀಡಿದ್ದು, ಭಾರತ ಸುಲಭವಾಗಿ ಗೆಲ್ಲಲು ಅನುವು ಮಾಡಿಕೊಟ್ಟಿತು. ಮೋಹಿತ್ ಶರ್ಮಾ, ಅಕ್ಸರ್ ಪಟೇಲ್ ಎದುರಾಳಿ ತಂಡದ ತಲಾ ಒಂದೊಂದು ವಿಕೆಟ್ ಉರುಳಿಸಿದರೆ, ಮುರಳಿ ವಿಜಯ್ ಒಂದು ವಿಕೆಟ್ ಪಡೆದರು.

ಜಿಂಬಾಬ್ವೆಯ ಆರಂಭಿಕ ಆಟಗಾರರಾದ ಡೊನಾಲ್ಡ್ ಟಿರಿಪಾನೋ ಮತ್ತು ನೆವೆಲ್ಲೆ ಮಾಡ್ಜಿವಾ ಅನುಕ್ರಮವಾಗಿ 46 ಮತ್ತು 59 ರನ್ ಗಳಿಸಿ, ಉತ್ತಮ ಆರಂಭಿಕ ಪ್ರದರ್ಶನ ನೀಡಿದರು. ಜತೆಗೆ ಛಿಭುಭಾ ಅರ್ಧ ಶತಕ ಗಳಿಸಿದರೂ, ಭಾರತದ ಸವಾಲನ್ನು ಬೆನ್ನೆಟ್ಟುವಲ್ಲಿ ತಂಡ ವಿಫಲವಾಯಿತು.

Write A Comment