ಮನೋರಂಜನೆ

ಅಬ್ಬಬ್ಬಾ! ಕಂಗನಾಳ ಸಂಭಾವನೆ ಎಷ್ಟು ಗೊತ್ತಾ ..?

Pinterest LinkedIn Tumblr

kanganaಬಾಲಿವುಡ್ ನಲ್ಲಿ ತಮ್ಮ ಅಭಿನಯದ ಮೂಲಕವೇ ಯಶಸ್ಸಿನ ಮೆಟ್ಟಿಲೇರಿದ ನಟಿ ಕಂಗನಾ ರಾಣಾವತ್ ಇದೀಗ ತಮ್ಮ ಸಂಭಾವನೆಯ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ‘ತನು ವೆಡ್ಸ್ ಮನು ರಿಟರ್ನ್ಸ್’ ಮತ್ತು ‘ಕ್ವೀನ್’ ಎಂಬ ಯಶಸ್ವಿ ಚಲನಚಿತ್ರದಲ್ಲಿ ನಟಿಸಿ ಯಶಸ್ಸು ಗಳಿಸುತ್ತಿದ್ದಂತೆ ತಮ್ಮ ಬೇಡಿಕೆಯನ್ನು ಅರಿತಿರುವ ಕಂಗನಾ ಅದಕ್ಕೆ ತಕ್ಕಂತೆ ತಮ್ಮ ಸಂಭಾವನೆ ಮೊತ್ತವನ್ನೂ ಹೆಚ್ಚಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಚಿತ್ರವೊಂದರಲ್ಲಿ ನಟಿಸಲು ಕಂಗನಾ ಆರು ಕೋಟಿಗಳ ಬೇಡಿಕೆ ಇಡುತ್ತಿದ್ದು ಇದು ನಾನು ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರ. ನಾನು ಚಲನಚಿತ್ರ ರಂಗದಲ್ಲಿ ಕಳೆದ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ಆ ಹಣಕ್ಕೆ ನಾನು ಅರ್ಹಳಾಗಿದ್ದೇನೆ ಎಂಬ ಸಿದ್ದ ಉತ್ತರವನ್ನೂ ನೀಡಿದ್ದಾಳೆ.

ಏನೇ ಇರಲಿ, ತಮ್ಮ ಹಾಟ್ ಅಭಿನಯದ ಜತೆ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಿರುವ ಬಾಲಿವುಡ್ ಬೆಡಗಿಯರು ಆ ಮೂಲಕ ಅವಕಾಶ ಪಡೆಯುವುದರ ಜತೆಗೆ ಹಣವನ್ನು ಗಳಿಸುತ್ತಿರುವುದು ಗೊತ್ತಿರುವ ವಿಷಯವೇ. ಆದರೆ ಇಷ್ಟೊಂದು ಸಂಭಾವನೆ ಪಡೆಯುವುದು ತರವಲ್ಲ ಎಂಬ ಅಭಿಪ್ರಾಯವನ್ನು ನಿರ್ಮಾಪಕರು ಆಪ್ತರಲ್ಲಿ ವ್ಯಕ್ತಪಡಿಸುತ್ತಿದ್ದಾರಂತೆ.

Write A Comment