ಮನೋರಂಜನೆ

ಕಣ್ಣುಗಳಿಗೆ ಗಾಗಲ್ಸ್ ಗುಂಗು

Pinterest LinkedIn Tumblr

kannugalu

“ಕಣ್ಣು ಹೇಗೇ ಇರಲಿ…ಅದಕ್ಕೊಂದು ಕೂಲಿಂಗ್ ಗ್ಲಾಸ್ ಇರಲಿ”. ಇದು ಸದ್ಯದ ಯುವ ಜನಾಂಗದಲ್ಲಿ ಎಲ್ಲರೂ ಒಪ್ಪಿಕೊಳ್ಳುವ ಒಂದು ಟ್ಯಾಗ್ ಲೈನ್.  ಸಿಟಿಗಳಲ್ಲಂತೂ ಕಣ್ಣಿಗೆ ಕನ್ನಡಕ ಇಲ್ಲದವರನ್ನು ಕನ್ನಡಕ ಹಾಕಿಯೇ ಹುಡುಕಬೇಕು. ಏಕೆಂದರೆ ಕನ್ನಡಕ ಈಗ ಸ್ಪೆಕ್ಟ್, ಗಾಗಲ್ಸ್ ಆಗಿ ಬದಲಾಗಿ ಫ್ಯಾಷನ್ ರೂಪ ತಾಳಿದೆ. ಅದರಲ್ಲೂ ಯುವಜನತೆಗೆ ಈ ಕನ್ನಡಕಗಳು ಅಚ್ಚು ಮೆಚ್ಚು. ಬಣ್ಣ ಬಣ್ಣ,ಬಗೆಬಗೆಯ ಕನ್ನಡಕಗಳನ್ನು ಧರಿಸುವಲ್ಲಿ ಯುವಕರಿಗೆ ಅದೇನೋ ಖುಷಿ. ಫ್ಯಾಷನ್ ನೆಪದಲ್ಲಿ ಧರಿಸುವ ಕನ್ನಡಕ ಕಣ್ಣಿನ ದೃಷ್ಟಿಯನ್ನು ಕಿತ್ತುಕೊಳ್ಳಬಹುದು ಎಂಬ ಕಿಂಚಿತ್ತೂ ಭಯವಿಲ್ಲದೇ ನಾನಾತರಹದ ಕನ್ನಡಕಗಳನ್ನು ಧರಿಸುವ ಇಂದಿನವರು ಈ ಕನ್ನಡಕಗಳ ಕ್ರೇಜ್‍ಗೆ ಮನಸೋತಿದ್ದಾರೆ.  ಕೆಲವರಂತೂ ಕನ್ನಡಕ ಹಾಕಿಕೊಳ್ಳೊ ಉದ್ದೇಶವೇ ಬೇರೆಯಾಗಿರುತ್ತೆ.   ಏಕೆಂದರೆ ಕೆಲವರು ಸನ್‍ಗ್ಲಾಸ್‍ನಲ್ಲೇ ಒಂದು ಹನಿ ಕಣ್ಣೀರು ಹಾಕಿದ್ರೆ, ಸಿಟ್ಟು  ಮಾಡಿಕೊಂಡ್ರೆ, ಮುಜುಗರಕ್ಕೆ ಒಳಗಾದರೂ ಅಥವಾ ಇನ್ನೇನೇ ಮಾಡಿದರೂ ಎದುರಿಗೆ ಇರುವವರಿಗೆ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಸಾನಿಯಾಳಿಂದ ಹಿಡಿದು ಸೊನಿಯಾ ವರೆಗೂ ಸನ್‍ಗ್ಲಾಸ್ ಕಣ್ಣುಗಳನ್ನು ಹಾಗೂ ಅವುಗಳಲ್ಲಿನ ಭಾವನೆಗಳನ್ನು  ಮರೆಮಾಡುತ್ತಲೇ ಬಂದಿವೆ ಈ ಸನ್ ಗ್ಲಾಸ್‍ಗಳು.

ಬಿಸಿಲಿಗೆ ಅನಿವಾರ್ಯ ಅಂದಾದರೆ, ಸಂಜೆಯ ಝಗಮಗಿಸುವ ಬೆಳಕಿನ ಪಾರ್ಟಿಗೆ ಸನ್‍ಗ್ಲಾಸ್ ಯಾಕೆ? ಕೆಲವರು ಸದಾ ಸನ್‍ಗ್ಲಾಸ್‍ನಲ್ಲಿ ತಮ್ಮ ಕಂಗಳನ್ನು ಅಡಗಿಸಿಕೊಂಡಿರುತ್ತಾರೆ. ಭಾವನೆಗಳನ್ನು ಮುಚ್ಚಿಡುವ ತಂತ್ರವಿರಬಹುದು.  ಏನೇಹೇಳಿ ಸನ್‍ಗ್ಲಾಸ್ ಹಾಕೋರು ಮಾಡಿದ್ದೆಲ್ಲ ಫ್ಯಾಷನ್. ಸಾಮಾನ್ಯ ಜನ ಕೂಡ ಸೂರ್ಯನಿಂದ ರಕ್ಷಣೆ ಸಿಗಲಿ ಅಂತಷ್ಟೇ ಅಲ್ಲ, ಸ್ಟೈಲï, ಸೆಲೆಬ್ರೆಟಿ ಲುಕ್‍ಗೋಸ್ಕರ ಸನ್‍ಗ್ಲಾಸ್ ಧರಿಸುವವರು ಇದ್ದಾರೆ. ಟಿವಿ ಕಲಾವಿದರು, ಸಿನಿಮಾ ಮಂದಿ, ಮಾಡೆಲï ಜಗತ್ತಿನವರನ್ನು ನೋಡಿಯೇ ಅದೆಷ್ಟೊ ಮಂದಿ ಸನ್‍ಗ್ಲಾಸ್ ಮೊರೆ ಹೋಗುತ್ತಾರೆ. ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್ ನೀಡುವ ಕನ್ನಡಕ ಧರಿಸಲು ಯಾರು ತಾನೇ ಇಷ್ಟಪಡಲ್ಲ ಹೇಳಿ? ಅಷ್ಟೆ ಅಲ್ಲ, ನಿಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವಂಥ ಸನ್‍ಗ್ಲಾಸನ್ನು ಮಾತ್ರ ಬಳಸಿ.

ಹಳೆ ಕಾಲದ ಸಿನಿಮಾಗಳಲ್ಲಿ ನಾಯಕರ ಕಣ್ಣನ್ನು ಅಲಂಕರಿಸಿದ್ದ ದೊಡ್ಡ ಗಾತ್ರದ ಕನ್ನಡಕಗಳು ಇದೀಗ ಹರೆಯದ ಹುಡುಗರಿಗೆ ಅಚ್ಚುಮೆಚ್ಚು. ಫ್ರೇಮ್‍ಗಳ ಮೇಲೆ ಅಲ್ಲಲ್ಲಿ ಹೊಳೆಯುವ ವಜ್ರದ ಹರಳುಗಳಿರುವ ಕನ್ನಡಕದಲ್ಲಿ ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಹಾತೊರೆಯುತ್ತಾರೆ. ಈಗಂತೂ ಹಲವಾರು ಬಗೆಯ ಸನ್‍ಗ್ಲಾಸ್‍ಗಳು ಕಪ್ಪು, ಬೂದು, ಕಂದು ಬಣ್ಣಗಳಲ್ಲಿ ಡಿಫರೆಂಟ್ ಲುಕ್ ನೀಡುತ್ತವೆ. ಸೆಲೆಬ್ರೆಟಿಗಳನ್ನು ನೋಡಿ ಅಂಥದ್ದೇ ಕನ್ನಡಕ ಧರಿಸುವ ಆಸೆ ಆದರೆ ತಪ್ಪೇನೂ ಅಲ್ಲ. ಆದರೆ ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಹಾಗೂ ಕಂಫರ್ಟ್ ಅಂದೆನಿಸುವಂಥ ಕನ್ನಡಕಗಳನ್ನು ಮಾತ್ರ ಖರೀದಿಸಿ. ಚಂದ ಕಂಡಿದ್ದೆಲ್ಲ ನಿಮಗೆ ಹೊಂದಿಕೆ ಆಗಲ್ಲ ಅನ್ನುವುದು ನೆನಪಿರಲಿ.  ಆದರೆ ಯಾವಾಗ,

ಯಾವ ಕನ್ನಡಕಗಳನ್ನು ಏಕೆ ಧರಿಸಬೇಕು ಎಂಬ ಅರಿವಿಲ್ಲದೆ, ಬಣ್ಣಬಣ್ಣದಲ್ಲಿ ಬೀದಿಬೀದಿಗಳಲ್ಲಿ ಸಿಗುವ ಗಾಗಲ್ಸ್‍ಗಳನ್ನು ಧರಿಸುವುದು ಎಷ್ಟು ಸರಿ.? ಎಂದು ಯೋಚಿಸುವುದು ಒಳಿತು.  ಜೇಬನ್ನು ಕಿತ್ತು ತಿನ್ನೋ ಮಾಲ್‍ಗಳಿಂದ ಹಿಡಿದು ರಸ್ತೆ ಬದಿಯಲ್ಲೂ ಇದೀಗ ಸನ್‍ಗ್ಲಾಸ್‍ಗಳು ಬಿಕರಿಯಾಗುತ್ತಿವೆ. ಬಿಸಿಲಿನಿಂದ ಕಣ್ಣನ್ನು ರಕ್ಷಿಸಿಕೊಳ್ಳಲಿಕ್ಕೆ ಅನ್ನೋದು ಕೆಲವರಿಗಂತೂ ನೆಪ. ಸ್ಟೈಲಿಶ್ ಅದ್ರಲ್ಲೂ ಸೆಲೆಬ್ರಿಟಿ ಲುಕ್ ನೀಡುವ ಕನ್ನಡಕಗಳಲ್ಲೇ ಮಿಂಚಲು ಅದೆಷ್ಟು ಮಂದಿ ಕನ್ನಡಕಗಳ ಅಂಗಡಿಗಳಿಗೆ ಮುಗಿ ಬಿಳುತ್ತಾರೋ? ಒಟ್ಟಾರೆ ಸನ್‍ಗ್ಲಾಸ್‍ಗಳ ಮಾರುಕಟ್ಟೆÀಯಲ್ಲಂತೂ ಕಲರ್‍ಫುಲï ಕನ್ನಡಕಗಳು ಯಾರ್‍ಯಾರದ್ದೋ ಕಣ್ಣುಗಳನ್ನು ಅಲಂಕರಿಸಲು ಕಾದು ಕುಳಿತಿವೆ. ನೂರಾರು ರೂ.ಗಳಿಂದ ಸಾವಿರಾರು ರೂ.ಗಳ ತನಕ ಕನ್ನಡಕಗಳು ಸಿಗುತ್ತವೆ. ಕಡಿಮೆ ಬೆಲೆಗೂ ಸೆಲೆಬ್ರ್ರೆಟಿಗಳು ಧರಿಸುವಂಥ ಸ್ಟೈಲಿಶ್ ಕನ್ನಡಕಗಳನ್ನೇ ಖರೀದಿಸಬಹುದು. ಆದರೆ ಎಲ್ಲವೂ ಅಸಲಿಯಲ್ಲ. ಬಹುತೇಕ ಸೆಲೆಬ್ರೆಟಿಗಳು ಧರಿಸುವುದು ದುಬಾರಿ ಬೆಲೆಯ ಹಾಗೂ ಗುಣಮಟ್ಟದ ಸನ್‍ಗ್ಲಾಸ್‍ಗಳು. ಅವುಗಳನ್ನೇ ಹೋಲುವ ತೀರಾ ಕಡಿಮೆ ಬೆಲೆಗೆ ನಕಲಿ ಕನ್ನಡಕಗಳು ಮಾರುಕಟ್ಟೆಯಲ್ಲಿವೆ. ಅವುಗಳನ್ನು ಖರೀದಿಸಬೇಡಿ ಅಂತಲ್ಲ. ಆದರೆ ಗುಣಮಟ್ಟವಲ್ಲದ ಕನ್ನಡಕಗಳನ್ನು ತುಂಬಾ ಹೊತ್ತು ಧರಿಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲ ನಿಮಿಷ ಅಥವಾ ನಿಗದಿತ ಸಂದರ್ಭಕ್ಕೆ ಮಾತ್ರ ಅಂತಾದರೆ ಚಿಂತಿಸಬೇಕಿಲ್ಲ.

ಕನ್ನಡಕ ಧರಿಸುವುದು ಫ್ಯಾಷನ್. ಸನ್ ಗ್ಲಾಸ್ ಆಗಿರಲಿ ಅಥವಾ ದೃಷ್ಟಿ ದೋಷಕ್ಕೆ ಬಳಸುವ ಕನ್ನಡಕ ಆಗಿರಲಿ ಧರಿಸಿದಾಗ ಅದು ಫ್ಯಾಷನೇಬಲï ಆಗಿ ಕಾಣಬೇಕು, ಮುಖಕ್ಕೆ ವಿಶೇಷ ಕಳೆ ನೀಡುವಂತೆ ಇರಬೇಕೆಂದು ಬಯಸುತ್ತಾರೆ. ಆದರೆ ಕನ್ನಡಕ ಧರಿಸುವುದರಿಂದ ನಮ್ಮ ಮೇಕಪ್, ಕಣ್ಣಿನ ಸುತ್ತಲು ಬ್ಲ್ಯಾಕ್‍ಹೆಡ್ಸ್ ಕಾಣಿಸಿಕೊಳ್ಳುವುದು ಎಂಬುದು ಕೆಲವರ ಅಸಮಾಧಾನ.  ಆದ್ದರಿಂದ ಇಲ್ಲಿ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ, ಅವುಗಳನ್ನು ಪಾಲಿಸಿದರೆ ಕನ್ನಡಕ ಧರಿಸಿದಾಗ ಮೇಕಪ್ ಹಾಳಾಗುವುದಿಲ್ಲ, ಮುಖ ಆಕರ್ಷಕವಾಗಿ ಕಾಣುವುದು. ಜೊತೆಗೆ ಕಾಸ್ಟ್ಲಿ ಎನಿಸಿದರೂ ಕ್ವಾಲಿಟಿ ಕಡೆ ಗಮನ ಕೊಡಿ.  ಫ್ರೇಂ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶವೆಂದರೆ ಅದು ನಿಮ್ಮ ಮುಖದ ಆಕಾರಕ್ಕೆ ಒಪ್ಪುತ್ತದೆಯೇ ಎಂದು ಪರೀಕ್ಷಿಸಿ ತೆಗೆದುಕೊಳ್ಳಬೇಕು.

ಪ್ರತಿಫಲನವಲ್ಲದ ಕೋಟಿಂಕ್ ಇರುವ ಫ್ರೇಂ ಬಳಸುವುದು ತ್ವಚೆಗೆ ಒಳ್ಳೆಯದು. ಮಂದ ಬಣ್ಣ ಇರುವ ಸನ್ ಗ್ಲಾಸ್ ಕಪ್ಪು ಬಣ್ಣದ ತ್ಚಚೆಯವರಿಗೆ ಮತ್ತು ಬಿಳಿ ಬಣ್ಣದ ಅಥವಾ ಸ್ವಲ್ಪ ಹೊಳೆಯುವ ಬಣ್ಣದ ಫ್ರೇಂ ಬಿಳಿ ತ್ವಚೆಯವರಿಗೆ ಚೆನ್ನಾಗಿ ಕಾಣಿಸುವುದು.  ನಿಮಗೆ ಹಳದಿ ಬಣ್ಣದ ಫ್ರೇಂ ಇರುವ ಕನ್ನಡಕ ತುಂಬಾ ಇಷ್ಟವಾಗಿದೆ ಅಂತ ಕೊಳ್ಳುವ ಮೊದಲು ಅದನ್ನು ಧರಿಸಿದರೆ ನಿಮ್ಮ ಮುಖಕ್ಕೆ ಚೆಂದ ಕಾಣುತ್ತದೆಯೇ ಎಂದು ನೋಡಿ ತೆಗೆದುಕೊಳ್ಳಬೇಕು. ಆದ್ದರಿಂದ ಕನ್ನಡಕ ಧರಿಸಿದಾಗ ಮುಖದ ಅಂದ ಹೆಚ್ಚಿಸುವಂತಹ ಕನ್ನಡಕದ ಆಯ್ಕೆ ಒಳ್ಳೆಯದು.  ಸನ್ ಗ್ಲಾಸ್ ಧರಿಸುವುದಾದರೆ ಕಣ್ಣು ರೆಪ್ಪೆಗಳಿಗೆ ಅಲಂಕಾರ ಬೇಕಾಗಿಲ್ಲ. ಆದರೆ ದೃಷ್ಟಿ ದೋಷಕ್ಕೆ ಅಥವಾ ತಲೆನೋವಿಗೆ ಬಳಸುವ ಕನ್ನಡಕವಾದರೆ ಕಣ್ಣಿನ ಅಲಂಕಾರ ಮಾಡಿದರೆ ಮುಖ ಆಕರ್ಷಕವಾಗಿ ಕಾಣುವುದು.

Write A Comment