ಮನೋರಂಜನೆ

ಸನ್ನಿ ಲಿಯೋನ್ ತನ್ನ ಪತಿಯ ಬಗ್ಗೆ ಹೇಳಿದ್ದೇನು ?

Pinterest LinkedIn Tumblr

sunnyಕಿರುತೆರೆ ರಿಯಾಲಿಟಿ ಷೋ ಸ್ಪ್ಲಿಟ್ಸ್ ವಿಲ್ಲಾದ ಸೀಸನ್ 8 ರಲ್ಲಿ ಭಾಗವಹಿಸಲಿರುವ ಸನ್ನಿ ಲಿಯೋನ್ ತಮ್ಮ ಪತಿಗೆ ತಮ್ಮ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿಲ್ಲ ಎಂದು ಹೇಳಿದ್ದಾರೆ.

ಬಾಲಿವುಡ್ ನಲ್ಲಿಯೂ ಬಿಡುವಿಲ್ಲದೇ ತೊಡಗಿಸಿಕೊಂಡಿರುವ ಸನ್ನಿ ಲಿಯೋನ್, ಸ್ಪ್ಲಿಟ್ಸ್ ವಿಲ್ಲಾದ ಸೀಸನ್-8 ರಲ್ಲಿ ಮತ್ತೊಮ್ಮೆ ರಣ್ ವಿಜಯ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದು ಇಬ್ಬರ ನಡುವೆ ಬಲವಾದ ಬಾಂಧವ್ಯವನ್ನು ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ. ರಣ್ ವಿಜಯ್ ಸಿಂಗ್, ತಮಾಷೆಯ ಮತ್ತು ಚುರುಕಾದ ವ್ಯಕ್ತಿತ್ವ ಹೊಂದಿದ್ದು ಅವರೊಂದಿಗೆ ಶೋ ನಡೆಸಿಕೊಡುವ ಸಂದರ್ಭದಲ್ಲಿ ಸಾಕಷ್ಟು ಸಂತೋಷಪಟ್ಟಿದ್ದೇನೆ, ಅವರೊಂದಿಗೆ ಮತ್ತಷ್ಟು ಶೋಗಳನ್ನು ನಡೆಸಿಕೊಡುವುದಾಗಿ ಸನ್ನಿ ಲಿಯೋನ್ ಹೇಳಿದ್ದಾರೆ.

ಇವೆಲ್ಲದರಿಂದಾಗಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಆತಂಕಕ್ಕೊಳಗಾಗಿದ್ದರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸನ್ನಿಲಿಯೋನ್, ರಣ್ ವಿಜಯ್ ಸಿಂಗ್ ವಿವಾಹಿತರಾಗಿದ್ದು ಆತನಿಗೆ ಸುಂದರ ಪತ್ನಿ ಇದ್ದಾರೆ, ಅವರಿಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ, ಅದ್ದರಿಂದ ನನ್ನ ಪತಿಗೆ ನನ್ನ ಬಗ್ಗೆ ಅಭದ್ರತೆ ಕಾಡುವುದಿಲ್ಲ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಇದೇ ವೇಳೆ ವಯಸ್ಕರ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸದ ಸನ್ನಿ ಲಿಯೋನ್, ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

Write A Comment