ಮನೋರಂಜನೆ

ರಣಬೀರ್ ಜೊತೆ ತನ್ನ ಕೆಮಿಸ್ಟ್ರಿ ಚೆನ್ನಾಗಿರುತ್ತದೆ ಎಂಬುದು ದೀಪಿಕಾ ಆಲೋಚನೆ: ರಣ್ ವೀರ್

Pinterest LinkedIn Tumblr

dippi-ranತನ್ನ ಹಿಂದಿನ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಮತ್ತು ತನ್ನ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿರುತ್ತದೆ ಎಂಬ ಯೋಚನೆ ದೀಪಿಕಾ ಪಡುಕೋಣೆ ಮನಸ್ಸಿನಲ್ಲಿದೆ ಎಂದು ನಟ ಹಾಗೂ ದೀಪಿಕಾ ಗೆಳೆಯ ರಣವೀರ್ ಸಿಂಗ್ ಹೇಳಿದ್ದಾರೆ.

ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯಿಸುತ್ತಿದ್ದಾರೆ. ಈ ಹಿಂದೆ ರಾಮ್ ಲೀಲಾ ಚಿತ್ರದಲ್ಲಿ ಅಭಿನಯಿಸಿದ್ದ ಈ ಜೋಡಿ

ಎಲ್ಲರಿಂದ ಪ್ರಶಂಸೆ ಗಳಿಸಿತ್ತು.

ಬಾಜಿರಾವ್ ಮಸ್ತಾನಿ ಚಿತ್ರದ ಪ್ರಣಯ ದೃಶ್ಯಗಳಲ್ಲಿ ಉತ್ತಮವಾಗಿ ಅಭಿನಯಿಸಿದ್ದೇವೆ. ನಮ್ಮಿಬ್ಬರ ಕೆಮಿಸ್ಟ್ರಿ ತುಂಬಾ ವಿಶೇಷವಾಗಿದೆ. ಆದರೆ ದೀಪಿಕಾ ಯೋಚನೆಯೇ ಬೇರೆ ಇದೆ ಎಂದು ರಣವೀರ್ ಸಿಂಗ್ ತಿಳಿಸಿದ್ದಾರೆ,

ನಾನು ಮತ್ತು ಅನುಷ್ಕಾ ಹಾಗೂ ದೀಪಿಕಾ ಮತ್ತು ರಣಬೀರ್ ಕಪೂರ್ ಜೋಡಿ ಚೆನ್ನಾಗಿರುತ್ತದೆ ಎಂಬುದು ದೀಪಿಕಾ ಅಭಿಪ್ರಾಯವಾಗಿದೆ. ಆದರೆ ದೀಪಿಕಾಳ ಈ ಯೋಚನೆಯನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಬಾಜಿರಾವ್ ಮಸ್ತಾನಿ ಚಿತ್ರ ಮರಾಠ ಪೇಶ್ವೆ ಬಾಜಿ ರಾವ್ ಜೀವನದ ಕಥೆಯಾಧಾರಿತವಾಗಿದ್ದು, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

Write A Comment