ಮನೋರಂಜನೆ

ಲಂಚಾರೋಪ: ಮೂವರು ಕ್ರಿಕೆಟಿಗರ ವಿರುದ್ಧ ಬಾಂಬ್ ಸಿಡಿದ ಲಲಿತ್ ಮೋದಿ

Pinterest LinkedIn Tumblr

Ravindra-Jadeja-Suresh-Rainaನವದೆಹಲಿ: ಐಪಿಎಲ್‌‌‌ನ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ವೀಸಾ ನೆರವು ಕುರಿತಂತೆ ಬಿಜೆಪಿಯಲ್ಲಿ ತಲ್ಲಣವನ್ನೇ ಸೃಷ್ಠಿಸಿತ್ತು. ಇದೀಗ ಲಲಿತ್ ಮೋದಿ ಮತ್ತೆ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದು, ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರ ಮೇಲೆ ಲಂಚ ಪಡೆದ ಆರೋಪ ಮಾಡಿದ್ದಾರೆ.

ಲಲಿತ್  ಮೋದಿ ಆರೋಪಿಸಿರುವರಲ್ಲಿ ಇಬ್ಬರು ಭಾರತ ಕ್ರಿಕೆಟ್‌ ತಂಡದ ಮುಂಚೂಣಿ ಆಟಗಾರರಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜ. ಮತ್ತೊರ್ವ ವೆಸ್ಟ್‌ ಇಂಡೀಸ್‌ ಆಟಗಾರ ಡ್ವೈನ್ ಬ್ರಾವೋ. ಈ ಮೂವರೂ ಕೂಡ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿದೆ.

ಈ ಮೂವರು ಆಟಗಾರರೂ ಕೂಡ ರಿಯಲ್‌ ಎಸ್ಟೇಟ್‌ ಉದ್ಯಮಿಯೋರ್ವರಿಂದ ಲಂಚ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಅಗತ್ಯ ಮಾಹಿತಿಗಳನ್ನು ಅಂದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಸಿಇಓ ಡೇವ್‌ ರಿಚರ್ಡಸನ್‌ ಅವರಿಗೆ 2013ರ ಜೂನ್‌ನಲ್ಲಿಯೇ ನೀಡಿರುವುದಾಗಿ ಲಲಿತ್ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೊನೆಯಲ್ಲಿ ಲಂಚ ಪಡೆದಿರುವ ಮೂವರು ಆಟಗಾರರು ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಬಹಳ ಆಪ್ತರಾಗಿದ್ದಾರೆ. ಆದರೆ ಇವರು ಲಂಚ ಪಡೆದ ಬಗ್ಗೆ ಕೇವಲ ಬಲ್ಲ ಮೂಲಗಳಿಂದ ತಿಳಿದಿದೆ. ಇದು ಸತ್ಯವಲ್ಲ ಎಂಬುದು ನನ್ನ ಭಾವನೆ. ಒಂದು ವೇಳೆ ಈ ಆರೋಪ ಸತ್ಯವಾಗಿದ್ದಲ್ಲಿ ಇದರಲ್ಲಿ ಇನ್ನೂ ಹಲವು ಮಂದಿ ಆಟಗಾರರು ಭಾಗಿಯಾಗಿರಬಹುದು ಎಂದೂ ಕೂಡ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

Write A Comment