ಮನೋರಂಜನೆ

‘ಬೆನ್ನಿಗೆ ಬಿದ್ದ’ವರನ್ನು ನೋಡಿ ಕಂಗಾಲಾದ ಬಾಲಿವುಡ್ ನಟ !

Pinterest LinkedIn Tumblr

6052India-Bollywood-Actor-Hrithik-Roshan-Wallpaper-5ಮಹಿಳೆಯರ ಪಾಲಿನ ಕಣ್ಮಣಿ ಯಾಗಿರುವ ಬಾಲಿವುಡ್ ನಟ ಹೃತಿಕ್ ರೋಶನ್ ಇದೀಗ ತಮ್ಮ ‘ಬೆನ್ನಿಗೆ ಬಿದ್ದವರ’ ಸಂಖ್ಯೆಯನ್ನು ನೋಡಿ ದಂಗು ಬಡಿದಿದ್ದಾರೆ.

ಹೌದು. ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹೃತಿಕ್ ರೋಶನ್ ಅವರ ಫಾಲೋವರ್ಸ್ ಗಳ ಸಂಖ್ಯೆ ಕೋಟಿ ದಾಟಿದ್ದು ಇದರಿಂದ ಫುಲ್ ಖುಷ್ ಆಗಿರುವ 41 ರ ಹರೆಯದ ಹೃತಿಕ್ ರೋಶನ್ ಹಿಂಬಾಲಿಸಿದ ತಮ್ಮ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವೀಟರ್ ನಂತಹ ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಹಿಂಬಾಲಿಸುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಅತೀವ ಅಚ್ಚರಿ ತಂದಿದ್ದು, ಚಿತ್ರರಂಗದಲ್ಲಿ ಮತ್ತಷ್ಟು ಸಾಧಿಸಲು ಪ್ರೇರಣೆ ಸಿಕ್ಕಂತಾಗಿದೆ ಎಂದಿರುವ ಹೃತಿಕ್ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆಗಿದ್ದಾರೆ.

ಆಶುತೋಷ್ ಗೋವಾರಿಕರ್ ನಿರ್ದೇಶನದ ‘ಮೊಹೆಂಜೊ ದಾರೊ’ ಚಿತ್ರದ ಚಿತ್ರೀಕರಣದಲ್ಲಿರುವ ಹೃತಿಕ್ ರೋಶನ್  ಒಂದು ಕಾಲದಲ್ಲಿ ತಮ್ಮ ‘ಫಿಟ್ ಬಾಡಿ’ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದರು.

Write A Comment