ಮನೋರಂಜನೆ

ಪುನೀತ್ ಗೆ ಜೋಡಿಯಾಗ್ತಾರಂತೆ ರಚಿತಾ ರಾಮ್ !

Pinterest LinkedIn Tumblr

rachithಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸಿನ ಮೆಟ್ಟಿಲೇರುತ್ತಿರುವ ರಚಿತಾ ರಾಮ್ ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜತೆ ರೋಮ್ಯಾನ್ಸ್ ಮಾಡಲು ಮುಂದಾಗಿದ್ದಾರೆ.

ಹೌದು. ಪುನೀತ್ ಅಭಿನಯದ 25ನೇ ಚಿತ್ರ ‘ಚಕ್ರವ್ಯೂಹ’ ಚಿತ್ರಕ್ಕೆ ನಾಯಕಿಯಾಗಿ ರಚಿತಾ ರಾಮ್  ಅವರು ನಟಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದ್ದು ಈಗಾಗಲೇ ಚಿತ್ರದ ನಿರ್ದೇಶಕ ಶರವಣನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಪುನೀತ್‌ಗೆ ಜೊಡಿಯಾಗಿ ಮರಾಠಿ ಮತ್ತು ಹಿಂದಿ ಧಾರವಾಹಿಗಳಲ್ಲಿ ಮಿಂಚಿದ್ದ ಕಿರುತೆರೆ ನಟಿ ಪಲ್ಲವಿ ಸುಭಾಷ್ ಅವರನ್ನು ಕರೆ ತಂದಿದ್ದ ನಿರ್ದೇಶಕರಿಗೆ ಪಾತ್ರಕ್ಕೆ ನ್ಯಾಯ ಒದಗಿಸಲು ಪಲ್ಲವಿ ಸೋತಿದ್ದಾರೆ ಎಂಬ ಭಾವನೆ ಮೂಡಿದ್ದು ಇದೇ ಕಾರಣಕ್ಕೆ ನಾಯಕಿಯನ್ನು ಬದಲಾಯಿಸಲು ಚಿಂತನೆ ನಡೆಸಿದ್ದಾರಂತೆ.

ವಿಶೇಷವೆಂದರೆ ಈಗಾಗಲೇ 20 ದಿನಗಳ ಕಾಲ ಚಕ್ರವ್ಯೂಹ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು  ಕೇವಲು ಮೂರು ದಿನ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಪಲ್ಲವಿಯವರ ನಟಿಸಿದ ಸೀನ್ ಗಳನ್ನೂ ಮತ್ತೆ ಚಿತ್ರೀಕರಿಸಲಾಗುತ್ತಿದೆ ಎನ್ನಲಾಗುತ್ತಿದೆ.

Write A Comment