ಮನೋರಂಜನೆ

ಶೂಟಿಂಗ್ ಬಿಟ್ಟು ಸೈಕಲ್ ಹತ್ತಿದ ಶಾರುಖ್ !

Pinterest LinkedIn Tumblr

2567srk-cycle

ದಿಲ್ ವಾಲೆ ಚಿತ್ರದ ಶೂಟಿಂಗ್ ನಲ್ಲಿ ಕಾಲಿಗೆ ಗಾಯ ಮಾಡಿಕೊಂಡಿರುವ ಬಾಲಿವುಡ್ ನಟ ಶಾರುಖ್  ಖಾನ್ ಚಿತ್ರೀಕರಣದಿಂದ ಬ್ರೇಕ್ ಪಡೆದು ಸೈಕಲ್ ಹತ್ತಿ ಜಾಲಿ ರೈಡ್ ಮಾಡುತ್ತಿದ್ದಾರೆ.

ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ  ಶಾರುಖ್  ಗೆ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದು ಈ ಸೈಕಲ್ ಹತ್ತಿದ ಶಾರುಖ್ ಬಲ್ಗೇರಿಯಾದ ಬೀದಿಗಳಲ್ಲಿ ಖುಷಿ ಖುಷಿಯಾಗಿ ಸುತ್ತುತ್ತಿದ್ದಾರೆ. ಅಲ್ಲದೇ ತಮ್ಮ ಈ ಸೈಕಲ್ ಜಾಥಾದ ಫೋಟೋವನ್ನು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿಯೂ ಪ್ರಕಟಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ದಿಲ್ ವಾಲೆ ಚಿತ್ರ ಹಲವು ಅಡ್ಡಿಗಳ ನಡುವೆಯೂ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಡಿಸೆಂಬರ್ 18 ಕ್ಕೆ ತೆರೆ ಕಾಣಲಿದೆ.

Write A Comment