ಮನೋರಂಜನೆ

ಪ್ರೀತಿಸಿ ವಿವಾಹವಾಗಿ ಬಳಿಕ ವಿಚ್ಚೇದನ ಪಡೆದ ಬಾಲಿವುಡ್ ತಾರೆಯರು

Pinterest LinkedIn Tumblr

29361434984417aamir_reenaಸಿನಿಮಾಗಳಲ್ಲಿ ಪ್ರೀತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದವಾಗಿರುವ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸಂಗಾತಿಯನ್ನು ಕೈ ಬಿಡದೇ ಆ ಮೂಲಕ ಅಭಿಮಾನಿಗಳ ಆರಾಧ್ಯ ದೈವರಾಗುವ ಕೆಲ ಖ್ಯಾತ ಬಾಲಿವುಡ್ ನಟ- ನಟಿಯರು ನಿಜ ಜೀವನದಲ್ಲಿ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಅಂತವರ ಪಟ್ಟಿ ಇಲ್ಲಿದೆ ನೋಡಿ.

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ದೆಹಲಿ ಮೂಲದ ಉದ್ಯಮಿ ಸಂಜಯ್ ಕಪೂರ್ ಅವರನ್ನು 2003 ರಲ್ಲಿ ವಿವಾಹವಾದರು. ಇಬ್ಬರು ಮಕ್ಕಳನ್ನೂ ಹೊಂದಿರುವ ಈ ದಂಪತಿಗಳು ವಿವಾಹವಾದ 11 ವರ್ಷಗಳ ಬಳಿಕ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ಮುಂದಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಹಿರಂಗವಾಗಿಯೇ ಒಬ್ಬರ ಮೇಲೊಬ್ಬರು ಕೆಸರೆರೆಚಿಕೊಂಡಿದ್ದಾರೆ.

ಬಾಲಿವುಡ್ ನ ಮಿಸ್ಟರ್ ಫರ್ಪಕ್ಷನಿಸ್ಟ್ ಅಮೀರ್ ಖಾನ್ ತಮ್ಮ ಬಾಲ್ಯದ ಗೆಳತಿ ರೀನಾರನ್ನು 1986 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗಳಿಗೂ ಇಬ್ಬರು ಮಕ್ಕಳಿದ್ದು, 15 ವರ್ಷಗಳ ದಾಂಪತ್ಯ ಜೀವನದ ಬಳಿಕ 2002 ರಲ್ಲಿ ಪರಸ್ಪರ ಒಪ್ಪಿಗೆ ಮೂಲಕ ವಿಚ್ಚೇದನ ಪಡೆದುಕೊಂಡಿದ್ದಾರೆ. ವಿಚ್ಚೇದನದ ಬಳಿಕ ಅಮೀರ್ ಖಾನ್ ಬೆಂಗಳೂರು ಮೂಲದ ಯುವತಿ ಕಿರಣ್ ರಾವ್ ಜೊತೆ ವಿವಾಹವಾಗಿದ್ದಾರೆ.

ಹೃತಿಕ್ ರೋಷನ್ ಹಾಗೂ ಸೂಸಾನೆ ವಿವಾಹ ಬಾಲಿವುಡ್ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿತ್ತು. ಇದಕ್ಕೆ ಕಾರಣ ಇವರಿಬ್ಬರು ಹೊಂದಿದ್ದ ಚಿತ್ರರಂಗದ ಹಿನ್ನೆಲೆ. ಬಾಲ್ಯದಿಂದಲೂ ಸೂಸಾನ್ ರನ್ನು ಬಲ್ಲ ಹೃತಿಕ್ 2000 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗಳಿಗೂ ಇಬ್ಬರು ಮಕ್ಕಳಿದ್ದು, 2013 ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದಾರೆ. ವಿಚ್ಚೇದನ ಪಡೆಯುವ ವೇಳೆ ಸೂಸಾನೆ 400 ಕೋಟಿ ರೂ. ಪರಿಹಾರ ಪಡೆದಿದ್ದಾರೆಂಬ ಮಾತುಗಳೂ ಬಾಲಿವುಡ್ ನಲ್ಲಿ ಕೇಳಿ ಬಂದಿದ್ದವು.

ದಕ್ಷಿಣ ಭಾರತದ ಖ್ಯಾತ ನಟ ಕಮಲ ಹಾಸನ್ ತಮ್ಮ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದ ಬಳಿಕ 1980 ರಲ್ಲಿ ಬಾಲಿವುಡ್ ನಟಿ ಸಾರಿಕಾ ಜೊತೆ ಲಿವ್ ಇನ್ ರಿಲೇಶನ್ ನಲ್ಲಿ ಇದ್ದ ವಿಚಾರ ಆಗಿನ ಕಾಲದಲ್ಲಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇಬ್ಬರು ಮಕ್ಕಳು ಹುಟ್ಟಿದ ಬಳಿಕ ಇವರಿಬ್ಬರು ವಿವಾಹವಾಗಿದ್ದು, 2004 ರಲ್ಲಿ ಬೇರೆ ಬೇರೆಯಾಗಿದ್ದಾರೆ.

ಇದಕ್ಕೆ ವ್ಯತಿರಿಕ್ತವಾದ ಪ್ರಕರಣಗಳೂ ಬಾಲಿವುಡ್ ನಲ್ಲಿವೆ. ಧರ್ಮೇಂದ್ರ, ಹೇಮಾ ಮಾಲಿನಿ ಜೊತೆ ಎರಡನೇ ವಿವಾಹವಾಗಿದ್ದು ಇಂದಿಗೂ ಅನ್ಯೋನ್ಯವಾಗಿದ್ದಾರೆ. ಹಾಗೆಯೇ ಅಜಯ್ ದೇವಗನ್, ಕಾಜೋಲ್ ಜೊತೆ ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಅಕ್ಷಯ್ ಕುಮಾರ್ ರಾಜೇಶ್ ಖನ್ನಾ ಅವರ ಪುತ್ರಿ ಟ್ವಿಂಕಲ್ ಖನ್ನಾ ಜೊತೆ ವಿವಾಹವಾಗಿ ಸುಖವಾಗಿದ್ದಾರೆ.

Write A Comment