ಮನೋರಂಜನೆ

ಸಲ್ಮಾನ್ ರನ್ನು ತುಂಬಾ ಪ್ರೀತಿಸ್ತಾರಂತೆ ಪೂನಂ ಪಾಂಡೆ !

Pinterest LinkedIn Tumblr

8215hqdefault‘ಬೆತ್ತಲೆ’ ಹೇಳಿಕೆಯ ಮೂಲಕವೇ ಸಾಕಷ್ಟು ಪ್ರಸಿದ್ದಿ ಪಡೆದಿರುವ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಇದೀಗ ಸಲ್ಮಾನ್ ಖಾನ್ ಕುರಿತು ಮಾತನಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಕಳೆದ 2011ರ ವಿಶ್ವಕಪ್ ಸಂದರ್ಭದಲ್ಲಿ ಒಂದು ವೇಳೆ ಭಾರತ ವಿಶ್ವಕಪ್ ಗೆದ್ದಲ್ಲಿ ಬೆತ್ತಲೆಯಾಗುವುದಾಗಿ ಘೋಷಿಸಿ ಬೆಚ್ಚಿನ ಬೀಳಿಸಿದ್ದ ಪೂನಂ, ಈ ವರ್ಷದ ವಿಶ್ವಕಪ್ ನಲ್ಲಿಯೂ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸುವ ಮೂಲಕ ಹುಬ್ಬೇರುವಂತೆ ಮಾಡಿದ್ದರು.

ಇದೀಗ ತಮ್ಮ ಬಾಲ್ಯದಿಂದಲೂ ಮತ್ತು ಶಾಲಾ ದಿನಗಳಲ್ಲೂ ಸಲ್ಮಾನ್ ಖಾನ್ ಅವರನ್ನು ನೋಡಿದ್ದು ಪ್ರತಿಯೊಬ್ಬ ಯುವತಿ ಅವರನ್ನು ಇಷ್ಟಪಡುತ್ತಾಳೆ ಹಾಗಯೇ ನಾನೂ ಸಹ ಅವರನ್ನು ತುಂಬಾ ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದಾರೆ . ಅಷ್ಟೇ ಅಲ್ಲ, ಸಲ್ಮಾನ್ ಖಾನ್ ಕೂಡಾ ನನ್ನಂತೆಯೇ ಬಟ್ಟೆ ಬಿಚ್ಚಲು ಇಷ್ಟ ಪಡುತ್ತಾನೆ ನಮ್ಮಿಬ್ಬರ ನಡುವೆ ಸಾಮ್ಯತೆಯಿರುವುದರಿಂದ ಮತ್ತಷ್ಟು ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.

Write A Comment