ಮನೋರಂಜನೆ

ಅಪಘಾತ: ಮಾಜಿ ಹಾಕಿ ಪಟು ಶಿಶಿ ಬಾಲಾ ಸಾವು

Pinterest LinkedIn Tumblr

HOCKEY

ಹೊಸದಿಲ್ಲಿ: ಭಾರತ ತಂಡದ ಮಾಜಿ ಹಾಕಿ ಕ್ಯಾಪ್ಟನ್ ಶಶಿ ಬಾಲಾ (45) ಭಾನುವಾರ ತಮ್ಮ ಮಗನೊಂದಿಗೆ ಪಯಣಿಸುತ್ತಿದ್ದಾಗ, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಪಂಜಾಬ್‌ನ ರೋಪರ್‌-ಫಾಗ್ವಾರಾ ಪ್ರದೇಶದಲ್ಲಿ ಸಂಭವಿಸಿದ ಈ ಅವಘಡದಲ್ಲಿ ಶಶಿಯ 15 ವರ್ಷದ ಮಗ ಅಗ್ರಿಮ್ ಠಾಕೂರ್‌ಗೂ ಗಂಭೀರ ಗಾಯಗಳಾಗಿ, ಕೊನೆಯುಸಿರೆಳೆದಿದ್ದಾರೆ.

‘ಭಾರತ ಹಾಕಿ ತಂಡಕ್ಕೆ ಶಶಿ ಅವರ ಕೊಡುಗೆ ಅತೀವವಾಗಿದ್ದು, ಅವರ ಸಾವಿಗೆ ಹಾಕಿ ತಂಡ ಸಂತಾಪ ಸೂಚಿಸುತ್ತದೆ,’ ಎಂದು ಭಾರತೀಯ ಹಾಕಿ ತಂಡದ ಅಧ್ಯಕ್ಷ ನರೀಂದರ್ ಬಾತ್ರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1997ರಲ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲಾಡಿದ್ದ ಶಶಿ, 1998ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವ ಮಹಿಳಾ ಹಾಕಿ ಪಂದ್ಯದಲ್ಲಿ ಆಡಿದ ಭಾರತ ತಂಡದ ಸದಸ್ಯರಾಗಿದ್ದರು.
1997ರಲ್ಲಿ ಜಿಂಬಾವ್ವೆಯ ಹಜಾರೆಯಲ್ಲಿ ಎಫ್‌ಐಎಚ್ ಮಹಿಳಾ ವಿಶ್ವ ಕಪ್‌ ರಾಷ್ಟ್ರೀಯ ತಂಡದ ನಾಯಕತ್ವ ವಹಸಿದ್ದರು. ನಿವೃತ್ತಿ ನಂತರ ಭಾರತೀಯ ರೈಲ್ವೆ ಹಾಕಿ ತಂಡಕ್ಕೆ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನಂತರ ಪಂಜಾಬ್ ಹಾಕಿ ತಂಡದ ಆಯ್ಕೆಯ ಅಧಿಕಾರಿಯಾಗಿದ್ದರು.

Write A Comment