ಮನೋರಂಜನೆ

ಬಯಲಾಯ್ತು ನಟಿ ಜೆನ್ನಿಫರ್ ಲೋಪೆಜ್‌ ಸೌಂದರ್ಯ ರಹಸ್ಯ !!

Pinterest LinkedIn Tumblr

3271jennifer-lopez_press-2013-650ಬಾಲಿವುಡ್, ಹಾಲಿವುಡ್ ಸೇರಿದಂತೆ ಸಿನಿಮಾರಂಗದ ನಟಿಮಣಿಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾರೆ. ಇದು ಅವರ ವೃತ್ತಿ ಜೀವನದ ಅವಶ್ಯಕತೆಯೂ ಹೌದು. ಆದರೆ ಹಾಲಿವುಡ್ ನಟಿ ಜೆನ್ನಿಫರ್ ಲೋಪೆಜ್‌ ತಮ್ಮ ಸೌಂದರ್ಯಕ್ಕಾಗಿ ಮಾಡಿದ್ದೇನು ಗೊತ್ತಾ..? ಇಲ್ಲಿದೆ ಆಕೆಯ ರಹಸ್ಯ.

ಹೌದು. ವಯಸ್ಸಾದರೂ ಸದಾ ಹದಿನಾರರ ಯುವತಿಯಂತೆ ಕಾಣುವ ಹಾಲಿವುಡ್ ನಟಿ ಜೆನ್ನಿಫರ್ ಲೋಪೆಜ್‌ರ ಸೌಂದರ್ಯದ ರಹಸ್ಯ ಬಯಲಾಗಿದ್ದು ಆಕೆ ತಮ್ಮ ಚರ್ಮವನ್ನು ಕಾಂತಿಯುತವಾಗಿ ಇಟ್ಟುಕೊಳ್ಳಲು ಶಸ್ತ್ರಚಿಕಿತ್ಸೆ ರಹಿತ ಫೇಷಿಯಲ್ ಲಿಫ್ಟ್ ಟ್ರೀಟ್‌ಮೆಂಟ್‌ಗೆ 25 ಸಾವಿರ ಡಾಲರ್ ಗಳನ್ನು ಖರ್ಚು ಮಾಡಿದ್ದಾಳೆ. ಈ ಚಿಕಿತ್ಸೆಯಿಂದ ಮುಖದ ಮೇಲಿನ ಸುಕ್ಕು ಹೋಗಿದ್ದು ತಮ್ಮ ಹದಿಹರೆಯದ ರೂಪ ಕಂಡು ಸ್ವತಃ ಜೆನ್ನಿಫರ್ ಅವರೇ ಚಕಿತಗೊಂಡಿದ್ದಾರಂತೆ.

ಚಿತ್ರರಂಗಕ್ಕೆ ಬಂದು 13 ವರ್ಷಗಳಾದರೂ ಜೆನ್ನಿಫರ್ ಲೋಪೆಜ್‌ ಸೌಂದರ್ಯ ಕೊಂಚವೂ ಕಡಿಮೆಯಾಗಿಲ್ಲ. ಸಾರ್ವಕಾಲಿಕ ಸುಂದರಿಯಂತೆ ಕಂಗೊಳಿಸುತ್ತಿದ್ದ ಈಕೆಯ ರಹಸ್ಯ ತಿಳಿಯಲು ಹಲವಾರು ಮಂದಿ ಜೆನ್ನಿಫರ್ ಅವರ ಮೇಕಪ್ ಆರ್ಟಿಸ್ಟ್ ಮೇರಿ ಫಿಲ್ಸಿಪ್ಸ್ ಮೊರೆ ಹೋಗಿದ್ದರು. ಅಲ್ಲಿ ಆಕೆಯ ಸೌಂದರ್ಯದ ಗುಟ್ಟು ಹೊರಬಿದ್ದಿದ್ದು ಶಸ್ತ್ರಚಿಕಿತ್ಸೆ ಇಲ್ಲದೆಯೇ ಮುಖದ ಸುಕ್ಕುಗಳನ್ನು ಹೋಗಲಾಡಿಸುವ ಸಿಎಸಿಐ ಹೆಸರಿನ ಚಿಕಿತ್ಸೆ ಪಡೆದ ನಂತರ ಜೆನ್ನಿಫರ್ ನವ ಯುವತಿಯಂತೆ ಕಂಗೊಳಿಸುತ್ತಿದ್ದಾರಂತೆ.

ಏನೇ ಇರಲಿ, ಈ ಸುದ್ದಿ ಕೇಳಿ ಇನ್ನಿತರ ನಟಿಯರು ಆಕೆಯ ಮೇಕಪ್ ಮ್ಯಾನ್ ನ ಬೆನ್ನು ಬೀಳುವುದು ಖಚಿತ. ವಯಸ್ಸಾದರೇನಂತೆ ಸಿನಿಮಾದಲ್ಲಿ ನೋಡುವ ಹಾಗಿದ್ದರೆ ಸಾಕು ಎನ್ನುತ್ತಿದ್ದಾರೆ ಸಿನಿಮಾ ಪ್ರಿಯರು.

Write A Comment