ಮನೋರಂಜನೆ

ಪ್ರಿಯಾಂಕಾ ಛೋಪ್ರಾರ ‘ಬೆನ್ನಿಗೆ ಬಿದ್ದವರು’ ಎಷ್ಟು ಮಂದಿ ಗೊತ್ತಾ …?

Pinterest LinkedIn Tumblr

3351priyanka-chopra3ಬಾಲಿವುಡ್ ನಲ್ಲಿ ತನ್ನ ಅಭಿನಯದ ಮೂಲಕ ಸಾಕಷ್ಟು ಯಶಸ್ಸು ಪಡೆದಿರುವ ಚಿತ್ರ ನಟಿ ಪ್ರಿಯಾಂಕಾ ಛೋಪ್ರಾ ಬರೋಬ್ಬರಿ 10 ದಶಲಕ್ಷ ಮಂದಿ ಬೆನ್ನಿಗೆ ಬಿದ್ದಿದ್ದಾರೆ. ಇದೇನು ಹುಚ್ಚು ಅಂತೀರಾ ..? ಹಾಗಿದ್ದರೆ ಈ ಸ್ಟೋರಿ  ಓದಿ.

ಹೌದು. ಟ್ವಿಟ್ಟರ್​ನಲ್ಲಿ ಪ್ರಿಯಾಂಕಾ ಛೋಪ್ರಾ  ಅವರ ಅಭಿಮಾನಿಗಳ (ಫಾಲೋವರ್ಸ್) ಸಂಖ್ಯೆ 10 ದಶಲಕ್ಷವನ್ನು ದಾಟಿದ್ದು ಟ್ವಿಟ್ಟರ್ ಮೂಲಕವೇ ತಮ್ಮ ಸಂತಸವನ್ನು ಹಂಚಿಕೊಂಡ ಈ ನಟಿ ಈ ಮೈಲುಗಲ್ಲು ತಲುಪಿದ ಅದೃಷ್ಟಶಾಲಿ ನಾನು ತಿಳಿಸಿದ್ದಾರೆ.

ನಾನು ಇಷ್ಟೊಂದು ಪ್ರೀತಿಗೆ ಪಾತ್ರಳಾಗಿದ್ದೇನೆ ಎಂಬುದಕ್ಕೆ 10 ದಶಲಕ್ಷ ಕಾರಣಗಳು. ನಾನು ಇಷ್ಟೊಂದು ಅದೃಷ್ಟಶಾಲಿ ಏಕೆ ಎಂಬುದಕ್ಕೆ 10 ದಶಲಕ್ಷ ಕಾರಣಗಳು..! ನಿಮಗೆ ತುಂಬಾ ಧನ್ಯವಾದಗಳು ಎಂದು 32ರ ಹರೆಯದ ಈ ಚಿತ್ರನಟಿ, ತನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಅಭಿಮಾನಿಗಳಿಗೂ ಭಾನುವಾರ ಅಭಿನಂದನೆಗಳನ್ನು ಹೇಳಿದ್ದಾಳೆ.

ಏನೇ ಇರಲಿ , 2000ದಲ್ಲಿ ’ವಿಶ್ವ ಸುಂದರಿ’ ಪ್ರಶಸ್ತಿಗೆ ಪಾತ್ರರಾದ ಪ್ರಿಯಾಂಕಾ ‘ಐತ್ರಾಜ್’, ‘ಫ್ಯಾಷನ್’, ‘ಕಾಮಿನಿ’, ‘7 ಖೂನ್ ಮಾಫ್’ ಮತ್ತು ‘ಮೇರಿ ಕೋಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಂತೂ ಸತ್ಯ.

Write A Comment