ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್, ಅಭಿಮಾನಿಗಳಿಗೆ ತಾವು ಪದೇ ಪದೇ ಕಿರಿಕಿರಿ ಉಂಟು ಮಾಡ್ತಿದ್ದೀನಾ ಎಂದು ಕೇಳಿದ್ದಾರೆ. ಅಷ್ಟಕ್ಕೂ ಶಾರೂಕ್ ಖಾನ್ ಅಭಿಮಾನಿಗಳ ಮುಂದೆ ಈ ಪ್ರಶ್ನೆಯನ್ನಿಡಲು ಕಾರಣವಾಗಿರುವುದಾದರೂ ಏನು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.
ಬಹು ಕಾಲದ ನಂತರ ಜನಿಸಿರುವ ತಮ್ಮ ಮೂರನೇ ಪುತ್ರ ಅಬ್ರಹಾಂ ನನ್ನು ಶಾರೂಕ್ ಖಾನ್ ಬಹುವಾಗಿ ಹಚ್ಚಿಕೊಂಡಿದ್ದಾರಂತೆ. ಎಲ್ಲ ತಂದೆಯರಂತೆಯೇ ಶಾರೂಕ್ ಸಹ ಸಾಮಾಜಿಕ ಜಾಲ ತಾಣ ಟ್ವಿಟ್ಟರಿನಲ್ಲಿ ಪದೇ ಪದೇ ತಮ್ಮ ಮಗನ ಫೋಟೋಗಳನ್ನೇ ಹಾಕುತ್ತಾ ಆತನ ಬೆಳವಣಿಗೆಯನ್ನು ಕಂಡು ಸಂತಸಪಡುತ್ತಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರಿನಲ್ಲಿ ಸಕ್ರಿಯರಾಗಿರುವ ಶಾರೂಕ್, ಅಭಿಮಾನಿಗಳಿಗೆ ಇದುವರೆಗೂ ತಮ್ಮ ಚಿತ್ರಗಳ ಕುರಿತು ಅಪ್ ಡೇಟ್ಸ್ ಕೊಡುತ್ತಿದ್ದರು. ಅದರೆ ಅಬ್ರಹಾಂ ಜನನದ ನಂತರ ಶಾರೂಕ್ ರ ಬಹಳಷ್ಟು ಟ್ವೀಟ್ ಗಳು ಆತನ ಕುರಿತಾಗಿಯೆ ಇರುತ್ತವೆ. ಮಗನ ಫೋಟೋಗಳನ್ನೇ ಹಾಕುತ್ತಾ ಅಭಿಮಾನಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದೀನಾ ಎಂಬ ಭಾವ ಈಗ ಅವರಲ್ಲಿ ಮೂಡಿದೆ. ಈ ಕಾರಣಕ್ಕಾಗಿಯೇ ಶಾರೂಕ್ ಅಭಿಮಾನಿಗಳ ಮುಂದೆ ಟ್ವಿಟ್ಟರ್ ನಲ್ಲಿ ಈ ಪ್ರಶ್ನೆಯನ್ನಿಟ್ಟಿದ್ದಾರೆ.
ಶಾರೂಕ್ ಖಾನ್ ಪ್ರಸ್ತುತ ಕಾಜೋಲ್ ಜೊತೆಗಿನ ರೋಹಿತ್ ಶೆಟ್ಟಿ ನಿರ್ದೇಶನದ ‘ದಿಲ್ ವಾಲೇ’ ಚಿತ್ರದ ಚಿತ್ರೀಕರಣಕ್ಕಾಗಿ ಬಲ್ಗೇರಿಯಾದಲ್ಲಿದ್ದು, ಮಗ ಅಬ್ರಹಾಂ ತಾಯಿ ಜೊತೆ ಬಾರ್ಸಿಲೋನಾದಲ್ಲಿದ್ದಾನೆ. ಮಗನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಶಾರೂಕ್ ಹೇಳಿಕೊಂಡಿದ್ದಾರೆ.
