ಮನೋರಂಜನೆ

ಅಮೀರ್, ಶಾರುಖ್ ವಿರುದ್ಧ ಟ್ವೀಟ್ ಮಾಡಿದರೆ ಟ್ವಿಟರ್ ಬಿಟ್ಟು ಹೋಗ್ತೀನಿ: ಅಭಿಮಾನಿಗಳಿಗೆ ಸಲ್ಮಾನ್ ಎಚ್ಚರಿಕೆ

Pinterest LinkedIn Tumblr

salman

ಬಾಲಿವುಡ್ ನ ಖಾನ್ ತ್ರಯರಲ್ಲಿ ಯಾರು ಉತ್ತಮರು ಎಂಬ ಬಗ್ಗೆ ಅಭಿಮಾನಿಗಳು ಪರಸ್ಪರ ವಾಗ್ದಾಳಿ ನಡೆಸುವ ಬಗ್ಗೆ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಫೇಕ್ ಐಡಿ ಬಳಸಿಕೊಂಡು ತಮ್ಮ ಅಭಿಮಾನಿಗಳು ಶಾರುಖ್ ಖಾನ್ ಅಮೀರ್ ಖಾನ್ ಅಥಾವ ಅನ್ಯ ನಟರ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದರೆ ತಾವು ಟ್ವಿಟರನ್ನೇ ಬಿಟ್ಟು ಹೋಗುವುದಾಗಿ ಸಲ್ಮಾನ್ ಖಾನ್ ಎಚ್ಚರಿಸಿದ್ದಾರೆ. ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ವಿರುದ್ಧ ದ್ವೇಷಪೂರಿತ ಟ್ವೀಟ್ ಗಳನ್ನು ಮಾಡುತ್ತಿರುವುದನ್ನು ಗಮನಿಸಿರುವ ಸಲ್ಮಾನ್ ಖಾನ್,ಶಾರುಖ್ ಹಾಗೂ ಅಮೀರ್ ಖಾನ್ ರನ್ನು ದ್ವೇಷಿಸುವುದನ್ನು ಬಿಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

I vil not b on this social net work any more. Bus khallas, khatam, wanna follow me n want me to b here to Pyar mohobbat se raho. Or I am out
— Salman Khan (@BeingSalmanKhan) June 9, 2015

ಮತ್ತೊಬ್ಬರನ್ನು ದ್ವೇಷಿಸುವ ಟ್ವೀಟ್ ಮಾಡುವುದರಿಂದ ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡುತ್ತಿದ್ದಿರ ಎಂದು ಸಲ್ಮಾನ್ ಖಾನ್ ಅಭಿಮಾನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತಾವು ಹೇಳುವುದನ್ನು ಅಭಿಮಾನಿಗಳಿಗೆ ಅರ್ಥ ಮಾಡಿಸಲು ಸಲ್ಮಾನ್ ಖಾನ್ ಒಂದೇ ವಿಷಯದ ಬಗ್ಗೆ ಬರೋಬ್ಬರಿ 20 ಟ್ವೀಟ್ ಮಾಡಿದ್ದಾರೆ.

Fan who is on a false identity using it to put another actor,friend colleague down ,is no fan of mine,don’t like. simple funda hai.
— Salman Khan (@BeingSalmanKhan) June 8, 2015

ಯಾವುದೇ ನಟರು ತಮ್ಮ ಅಭಿಮಾನಿಗಳು ಅಂಧ ಪ್ರೇಮಿಗಳಾಗದಂತೆ ಮನವರಿಕೆ ಮಾಡಲು ಹೆಚ್ಚಿನ ಸಮಯ ಬಳಸುವುದಿಲ್ಲ.ಆದರೆ ಸಲ್ಮಾನ್ ಖಾನ್, ತಾಳ್ಮೆಯಿಂದ ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿರುವುದು ವಿಶೇಷವಾಗಿದೆ.

Write A Comment