ಮನೋರಂಜನೆ

ಸಂಭ್ರಮಾಚರಣೆಯಲ್ಲಿ ‘ಪಿಕೆ’; ಬಾಲಿವುಡ್ ಇತಿಹಾಸದಲ್ಲೇ ಅತಿ ಹೆಚ್ಚಿನ ಗಳಿಕೆ ಕಂಡ ಹೆಗ್ಗಳಿಕೆ

Pinterest LinkedIn Tumblr

pk

ಮುಂಬೈ: ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ‘ಪಿಕೆ’ ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ.

ಅಮೀರ್ ಖಾನ್ ನಟನೆಯ ಈ ಚಿತ್ರ ಜಾಗತಿಕವಾಗಿ 620 ಕೋಟಿ ರೂ ಗಳಿಕೆ ಕಂಡಿದೆ. ಬಾಲಿವುಡ್ ಇತಿಹಾಸದಲ್ಲೇ ಇದು ಅತಿ ಹೆಚ್ಚಿನ ಗಳಿಕೆ ಎನ್ನಲಾಗಿದೆ. ಭಾರತದಲ್ಲೇ ಈ ಸಿನೆಮಾ 320 ಕೋಟಿ ಗಳಿಸಿದ್ದರೆ ವಿದೇಶಗಳಲ್ಲಿನ ಗಳಿಕೆ 280 ಕೋಟಿ. ಈ ಗಳಿಕೆ ಇನ್ನೂ ಮುಂದುವರೆಯಲಿದೆ ಎನ್ನಲಾಗಿದೆ.

ರಾಜಕುಮಾರ್ ಹಿರಾನಿ ನಿರ್ದೇಶನದ ಹಾಗು ವಿದು ವಿನೋದ್ ಚೋಪ್ರಾ ನಿರ್ಮಿಸಿರುವ ಈ ಚಲನಚಿತ್ರ ಚೈನಾದಲ್ಲಿ ಕಳೆದ ತಿಂಗಳು ಬಿಡುಗಡೆ ಕಂಡು ಚೈನಾದಲ್ಲೇ 100 ಕೋಟಿ ಗಳಿಕೆಯನ್ನು ಮೀರಿದೆ. ಈ ಗಗನ ಗಳಿಕೆಯಯನ್ನು ಆಚರಿಸಲು ಇಡೀ ಚಿತ್ರತಂಡ ಇಂದು ಒಟ್ಟಾಗಲಿದೆ.

Write A Comment