ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೇಶಾದ್ಯಂತ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಅವರನ್ನೇ ಅನುಕರಿಸಲು ಅವರಿಂದ ಸ್ಪೂರ್ತಿಗೊಂಡ ಕೆಲ ಅಭಿಮಾನಿಗಳು ಯತ್ನಿಸುತ್ತಾರೆ. ಆದರೆ ಸಲ್ಮಾನ್ ಖಾನ್ ಅವರಿಗೆ ಸ್ಪೂರ್ತಿ ಯಾರೂ ಗೊತ್ತಾ. ಈ ಸ್ಟೋರಿ ಓದಿ.
ಸಲ್ಮಾನ್ ಖಾನ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಂತೆ ಹಾಲಿವುಡ್ ನಟ ಸಿಲ್ವೆಸ್ಟಾರ್ ಸ್ಟಾಲಿನ್ ಅವರಿಗೆ ಸ್ಪೂರ್ತಿಯಂತೆ. ಸ್ಟಾಲಿನ್ ಅವರನ್ನು ಸಾಮಾಜಿಕ ಜಾಲ ತಾಣ ಟ್ಟಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವ ಸಲ್ಮಾನ್ ತಮ್ಮ ಅಭಿಮಾನಿಗಳು ಸ್ಟಾಲಿನ್ ಅವರನ್ನು ಅನುಸರಿಸಲು ತಿಳಿಸಿದ್ದಾರೆ.
ನಿಮ್ಮ ಹೀರೋನ ಹೀರೋ ಆದ ಸ್ಟಾಲಿನ್ ಅವರನ್ನು ಫಾಲೋ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. 13 ವರ್ಷಗಳ ಹಿಂದೆ ನಡೆದ ಅಪಘಾತ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಬಳಿಕ ಹೈಕೋರ್ಟಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಸಲ್ಮಾನ್ ಖಾನ್ ಅದರ ನಂತರ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಳ್ಳುತ್ತಿದ್ದಾರೆ. ಅಲ್ಲದೇ ನ್ಯಾಯಾಲಯದ ತೀರ್ಪಿನ ಬಳಿಕ ಅಭಿಮಾನಿಗಳು ತೋರಿದ ಪ್ರೀತಿಗೂ ಧನ್ಯವಾದ ಸಲ್ಲಿಸಿದ್ದರು.