ಬೆಂಗಳೂರು: ಅಭಿನೇತ್ರಿ ನಂತರ ಪೂಜಾ ಗಾಂಧಿ ಪ್ರೊಡಕ್ಷನ್ಸ್ ನ ಎರಡನೇ ಚಿತ್ರ ಘೋಷಣೆಯಾಗಿದ್ದು, ಚಕ್ರವರ್ತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಮಳೆ ಹುಡುಗಿ ಪೂಜಾ ಗಾಂಧಿ ಅಭಿನೇತ್ರಿ ಸಿನೆಮಾ ಮೂಲಕ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು. ಈಗ ತಮ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ “ರಾವಣಿ” ಎನ್ನುವ ಸಿನೆಮಾ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಜನ್ಮ” ಚಿತ್ರ ನಿರ್ದೇಶಿಸಿದ್ದ ಚಕ್ರವರ್ತಿ ಈ ಸಿನೆಮಾದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಾವಣನ ಫೀಮೇಲ್ ವರ್ಶನ್ ನಂತೆ ಸೌಂಡ್ ಆಗುವ “ರಾವಣಿ” ವಿಭಿನ್ನ ಕಥಾ ಹಂದರವನ್ನು ಒಳಗೊಳ್ಳಲಿದ್ದು, ಪೂಜಾ ಪಾತ್ರ ವಿಭಿನ್ನವಾಗಿ ಮೂಡಿಬರಲಿದೆ. ಅದಕ್ಕಾಗಿ ಪೂಜಾ ಗಾಂಧಿ ಫಿಟ್ನೆಸ್ ಮರಳಿ ಗಳಿಸಲು ವರ್ಕೌಟ್ ಆರಂಭಿಸಿದ್ದು, ಇನ್ನು ಮೂರು ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.