ಮನೋರಂಜನೆ

ಅಮ್ಮ ನನ್ನ ಕ್ಷಮಿಸು: ಸಾವಿಗೂ ಮುನ್ನ ತಾಯಿಗೆ ಕ್ಷಮೆ ಕೇಳಿದ ಆಟಗಾರ್ತಿ

Pinterest LinkedIn Tumblr

I-Am-Sorry- Amma-Kerala-Athlete-Told-Mother-Before-Dying

ತಿರುವನಂತಪುರ: ಸೀನಿಯರ್ಸ್ ಕಾಟ ಸಹಿಸಲಾಗದ ಆಥ್ಲಿಟ್ ಆಟಗಾರ್ತಿಯರು ವಿಷಪೂರಿತ ಹಣ್ಣು ತಿಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ಯುವತಿ ಅಪರ್ಣ ರಾಮಭದ್ರನ್ ತಾನು ಕೊನೆಯುಸಿರೆಳೆಯುವುದಕ್ಕೂ ಮೊದಲು ಅಮ್ಮ ನನ್ನು ಕ್ಷಮಿಸು ಎಂದು ಹೇಳಿದ್ದಳು ಎಂಬ ವಿಷಯವನ್ನು ಯುವತಿಯ ತಾಯಿ ಗೀತಾ ಶುಕ್ರವಾರ ಹೇಳಿದ್ದಾರೆ.

ಹಾಸ್ಟೆಲ್ ನಲ್ಲಿ ಸೀನಿಯರ್ಸ್ ನನಗೆ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಹಿಂಸೆ ನೀಡುತ್ತಿದ್ದರು. ಹೀಗಾಗಿ ಅದನ್ನು ಸಹಿಸಲು ಸಾಧ್ಯವಾಗದ ನಾವು ಯಾವ ದಿಕ್ಕು ತೋಚದೆ ಈ ರೀತಿಯ ನಿರ್ಧಾರ ಕೈಗೊಳ್ಳಬೇಕಾಯಿತು. ನಾನು ಬದಕುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನ ಮಗಳು ನನಗೆ ಹೇಳಿದ್ದಳು ಎಂದು ಯುವತಿ ತಾಯಿ ಗೀತಾ ಹೇಳಿದ್ದಾರೆ.

ಏಪ್ರಿಲ್ 15 ರಂದು ವಿಶು (ಹೊಸ ವರ್ಷ) ಹಬ್ಬದಂದು ನನ್ನ ಮಗಳು ಅಪರ್ಣ ಮನೆಗೆ ಬಂದಿದ್ದಳು. ಈ ವೇಳೆ ಹಾಸ್ಟೆಲ್ ಬಗ್ಗೆ ಹೇಳಿದ್ದಳು. ಸೀನಿಯರ್ಸ್ ಜೊತೆ ಒಂದೇ ರೂಮ್ ನಲ್ಲಿರುವುದು ಬಹಳ ಕಷ್ಟ. ಹೀಗಾಗಿ ರೂಮ್ ಬದಲಿಸಬೇಕೆಂದು ಹಾಸ್ಟೆಲ್ ವಾರ್ಡೆನ್ ಗೆ ಹೇಳಿದ್ದೆ.  ಇನ್ನೂ ಮೂರು ತಿಂಗಳಲ್ಲಿ ರೂಮ್ ಬದಲಾಯಿಸುತ್ತೇನೆ ಎಂದು ಅವರು ಪ್ರಮಾಣಿ ಮಾಡಿದ್ದಾರೆ ಎಂದು ಹೇಳಿದ್ದಳು.

ಇದಾದ ನಂತರ ಹಾಸ್ಟೆಲ್ ಗೆ ಮರಳಿ ಹೋದಾಗ ಕೆಲವು ದಿನಗಳ ಬಳಿಕ ಎಲ್ಲವೂ ಸರಿಯಿದೆ. ಇನ್ನು ಯಾವ ಸಮಸ್ಯೆಯಿಲ್ಲ ಎಂದು ಹೇಳಿದ್ದಳು. ಕುಟುಂಬದಲ್ಲಿ ಸಮಸ್ಯೆ ಇದ್ದ ಕಾರಣ ತಮ್ಮನಿಗೆ ಮುಂದೆ ಒಳ್ಳೆಯ ಜೀವನ ನೀಡಬೇಕೆಂಬ ಉದ್ದೇಶದಿಂದ ನನ್ನ ಮಗಳು ಹಾಸ್ಟೆಲ್ ನಲ್ಲಿದ್ದು ಓದುತ್ತಿದ್ದಳು ಎಂದು ಅವರು ಹೇಳಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಗೃಹ ಸಚಿವ ರಮೇಶ್ ಚೆನ್ನಿತಾಳ ಅವರು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಜಲ ಕ್ರೀಡಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ 4 ಯುವತಿಯರು ಸೀನಿಯರ್ಸ್ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಮೇ.7 ರಂದು ಪ್ರಾಧಿಕಾರದ ಮಹಿಳಾ ವಸತಿ ಗೃಹದಲ್ಲಿ ಒಥಲಂಗಾ ಎಂಬ ವಿಷಪೂರಿತ ಹಣ್ಣು ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು. ಹಣ್ಣು ತಿಂದ ಕೆಲವು ಗಂಟೆಗಳ ಬಳಿಕ ಯುವತಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರಲ್ಲಿ ಓರ್ವ ಯುವತಿ ಅಪರ್ಣ ಎಂಬಾಕೆ ಸಾವನ್ನಪ್ಪಿದ್ದಳು.
-ಕನ್ನಡಪ್ರಭ

Write A Comment