ಮನೋರಂಜನೆ

ಮತ್ತೊಂದು ಸಾಹಸಕ್ಕೆ ಮುಂದಾದ ಕನ್ನಡದ ಬೆಡಗಿ ಬಬ್ಲಿ ಬಬ್ಲಿ ನಾಯಕಿ ಐಶಾನಿ ಶೆಟ್ಟಿ

Pinterest LinkedIn Tumblr

3465aishani-shetty-20140612111332-33112

ಯೋಗರಾಜ್ ಭಟ್ಟರ ವಾಸ್ತು ಪ್ರಕಾರದ ಬಬ್ಲಿ ಬಬ್ಲಿ ನಾಯಕಿ ಐಶಾನಿ ಶೆಟ್ಟಿ ಇದೀಗ ಹೊಸ ಸಾಹಸಕ್ಕೆ ಮುಂದಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಹೌದು. ‘ರಾಕೆಟ್’ ಐಶಾನಿ ಶೆಟ್ಟಿ ಚಿತ್ರಕ್ಕಾಗಿ ಹಾಡೊಂದನ್ನು ಹಾಡಲಿದ್ದು ಆ ಮೂಲಕ ಸ್ಯಾಂಡಲ್ ವುಡ್ ನಾಯಕರ ಗಾಯನದ ಪಂಕ್ತಿಗೆ ಸೇರಲಿದ್ದಾರೆ. ವಾಸ್ತು ಪ್ರಕಾರ ಚಿತ್ರ ತಕ್ಕ ಮಟ್ಟಿನ ಯಶಸ್ಸು ಕಾಣಲು ವಿಫಲವಾದರೂ ಬೇಸರ-ಕಾತರ ಹಾಡಿನ ಮೂಲಕವೇ ಕನ್ನಡಿಗರ ಮನೆ ಮನಕ್ಕೆ ಕಾಲಿಟ್ಟಿ ಐಶಾನಿ ಇದೀಗ ನೀನಾಸಂ ಸತೀಶ್ ನಿರ್ಮಿಸಿ ನಟಿಸುತ್ತಿರುವ `ರಾಕೆಟ್’ ಚಿತ್ರದಲ್ಲಿ ನಟಿಸುವ ಜತೆಗೆ ಹಾಡನ್ನೂ ಹಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ಇನ್ನೂ ವಿಶೇಷವೆಂದರೆ ಐಶಾನಿ  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜತೆಗೆ ಹಾಡಲಿದ್ದು ಸದ್ಯ ವಿದೇಶ ಪ್ರವಾಸದಲ್ಲಿರುವ ಪುನೀತ್ ರಾಜ್ ಕುಮಾರ್ ಮರಳುತ್ತಿದ್ದಂತೆ ಹಾಡಿನ ರೆಕಾರ್ಡಿಂಗ್ ನಡೆಯಲಿದೆ ಎನ್ನಲಾಗಿದೆ.

Write A Comment