ಮನೋರಂಜನೆ

ರಿಯಲ್ ಮ್ಯಾಡ್ರಿಡ್‌ಗೆ ಕ್ಲಬ್ ವಿಶ್ವಕಪ್

Pinterest LinkedIn Tumblr

real-madrid1ಮರ್ರಕೇಶ್, ಡಿ.21: ಸೆರ್ಜಿಯೊ ರಾಮೊಸ್ ಹಾಗೂ ಗಾರೆತ್ ಬಾಲೆ ದಾಖಲಿಸಿದ ತಲಾ ಒಂದು ಗೋಲುಗಳ ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಕ್ಲಬ್ ವಿಶ್ವಕಪನ್ನು ಮುಡಿಗೇರಿಸಿಕೊಂಡಿದೆ. ಈ ವರ್ಷ ನಾಲ್ಕನೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಅರ್ಜೆಂಟೀನದ ಸ್ಯಾನ್ ಲೊರೆಂರೊ ತಂಡವನ್ನು 2-0 ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಈ ವರ್ಷ ಚಾಂಪಿಯನ್ಸ್ ಟ್ರೋಫಿ, ಕೋಪಾ ಡೆಲ್ ರೇ ಹಾಗೂ ಯುರೋಪಿಯನ್ ಸೂಪರ್ ಕಪ್ ಪ್ರಶಸ್ತಿಗಳನ್ನು ಜಯಿಸಿರುವ ಮ್ಯಾಡ್ರಿಡ್ ಶನಿವಾರ ಎಲ್ಲ ಟೂರ್ನಿಗಳಲ್ಲಿ ಸತತ 22ನೆ ಗೆಲುವು ಸಂಪಾದಿಸಿದೆ.

1971-72ರಲ್ಲಿ ಅಜಾಕ್ಸ್ ತಂಡ ಸಾಧಿಸಿದ್ದ ಸತತ 26 ಪಂದ್ಯಗಳ ಗೆಲುವಿನ ದಾಖಲೆ ಮುರಿಯಲು ಎದುರು ನೋಡುತ್ತಿದೆ. ಮ್ಯಾಡ್ರಿಡ್ ವರ್ಷಾಂತ್ಯದಲ್ಲಿ ಲಾಲಿಗ ಟೂರ್ನಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. 37ನೆ ನಿಮಿಷದಲ್ಲಿ ರಾಮೊಸ್ ಮ್ಯಾಡ್ರಿಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 51ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಗಾರೆತ್ ಬಾಲೆ ಮ್ಯಾಡ್ರಿಡ್ ಮುನ್ನಡೆಯನ್ನು 2-0 ಗೇರಿಸಿದರು.

ರಿಯಲ್ ಮ್ಯಾಡ್ರಿಡ್ ಗೋಲ್‌ಕೀಪರ್ ಐಕೆರ್ ಕ್ಯಾಸಿಲ್ಲಾಸ್ 65ನೆ ನಿಮಿಷದಲ್ಲಿ ಎದುರಾಳಿ ಆಟಗಾರ ಎನಮುಲ್ ಮಾಸ್ ಬಾರಿಸಿದ ಗೋಲನ್ನು ತಡೆಯಲು ಯಶಸ್ವಿಯಾದರು. ಆ ನಂತರ ಜುಯಾನ್ ಮೆರ್ಸಿಯೆರ್ ಹಾಗೂ ಎಂರೊ ಕಾಲಿನ್‌ಸ್ಕಿ ಬಾರಿಸಿದ ಗೋಲನ್ನು ತಡೆದರು. ಇದೇ ವೇಳೆ, ಕರೀಮ್ ಬೆಂರೆುಮಾ ಬಾರಿಸಿದ ಚೆಂಡು ಗೋಲು ಪೆಟ್ಟಿಗೆಯಿಂದ ಹೊರ ಹೋದ ಕಾರಣ ರಿಯಲ್ ಮ್ಯಾಡ್ರಿಡ್ ತಂಡ ಮೂರನೆ ಗೋಲನ್ನು ಬಾರಿಸುವ ಅವಕಾಶವನ್ನು ಕಳೆದುಕೊಂಡಿತು.

‘‘ನಮಗೆ ಇದು ವಿಶೇಷ ಕ್ಷಣ. ನಾವು ಸಂಘಟಿತವಾಗಿ ನಡೆಸಿದ ಪ್ರಯತ್ನ ಹಾಗೂ ಕಠಿಣ ಪರಿಶ್ರಮಕ್ಕೆ ಸಂದ ಗೌರವವಾಗಿದೆ ಇದಾಗಿದೆ’’ ಎಂದು ರಾಮೊಸ್ ನುಡಿದರು. ರಿಯಲ್ ಈ ಹಿಂದೆ ಓಲ್ಡ್ ಇಂಟರ್‌ಕಾಂಟಿನೆಂಟಲ್ ಕಪನ್ನು ಮೂರು ಬಾರಿ ಜಯಿಸಿದ್ದು, 2002ರಲ್ಲಿ ಕೊನೆಯ ಬಾರಿ ಈ ಕಪನ್ನು ಜಯಿಸಿತ್ತು.

‘‘ನಾವು ಈ ಪ್ರಶಸ್ತಿ ಗೆಲ್ಲಲು ಅರ್ಹರಿದ್ದೇವೆ. ಈ ಕ್ಷಣದಲ್ಲಿ ರಿಯಲ್ ಮ್ಯಾಡ್ರಿಡ್ ವಿಶ್ವದ ಶ್ರೇಷ್ಠ ತಂಡವಾಗಿದೆ’’ಎಂದು ಕೋಚ್ ಕಾರ್ಲೊ ಅನ್ಸೆಲಾಟ್ಟಿ ಹೇಳಿದ್ದಾರೆ.

Write A Comment