ಮನೋರಂಜನೆ

ಮುತ್ತಿನ ಚಿತ್ರ ರಾಜಕೀಯಕ್ಕಾಗಿ ದುರ್ಬಳಕೆ; ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ವೈಭವಿ

Pinterest LinkedIn Tumblr

Vabhavi

ಬೆಂಗಳೂರು: ‘ನಮ್ಮ ಮಗಳು ವೈಭವಿಗೆ ಸಚಿವ ಅಂಬರೀಷ್‌ ಅವರು ಮುತ್ತು ನೀಡಿರುವ ಛಾಯಾಚಿತ್ರ­ವನ್ನು ರಾಜಕೀಯವಾಗಿ ಬಳಸಿಕೊಂಡು ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದು ನಟ ಜೈ ಜಗದೀಶ್‌ ಅಳಲು ತೋಡಿಕೊಂಡಿದರು.

‘ಅಂಬರೀಷ್‌ ನಮ್ಮ ಕುಟುಂಬದ ಆಪ್ತರಲ್ಲೊಬ್ಬರು. ವೈಭವಿಯನ್ನು ಮಗಳಂತೆ ಕಾಣುತ್ತಾರೆ. ಆದರೆ, ಮಾಧ್ಯಮಗಳಲ್ಲಿ ಛಾಯಾಚಿತ್ರಗಳನ್ನು ಕೆಟ್ಟ ರೀತಿ­ಯಲ್ಲಿ ಬಿಂಬಿಸಲಾಗಿದೆ’ ಎಂದು ನೊಂದು ನುಡಿದರು. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿ, ‘ನಾಲ್ಕು ತಿಂಗಳ ಹಿಂದೆ ಅಂಬರೀಷ್‌ ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನನ್ನ ಮಗಳು ವೈಭವಿ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿ­ದ್ದಳು.

ಬಳಿಕ ಆ ಛಾಯಾಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಳು. ಆದರೆ, ಅಂಬರೀಷ್‌ ಅವರ ವಿರೋಧಿಗಳು ಆ ಚಿತ್ರಗಳನ್ನು ಮಾಧ್ಯಮಗಳಿಗೆ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ಆ ಛಾಯಾಚಿತ್ರವನ್ನು ಮಾಧ್ಯಮ­ಗಳಿಗೆ ನೀಡಿ­ದ­ವರು ಯಾರು ಎಂದು ಗೊತ್ತಾಗಿದೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡು­ತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಭವಿ ಅವರ ತಾಯಿ ವಿಜಯಲಕ್ಷ್ಮಿ ಸಿಂಗ್‌ ಮಾತನಾಡಿ, ‘ಮಾಧ್ಯಮಗಳಲ್ಲಿ ನಮ್ಮ ಮಗಳ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ಇದರಿಂದಾಗಿ ಅವಳು ಸಾರ್ವಜನಿಕವಾಗಿ, ಕಾಲೇಜಿನಲ್ಲಿ ಅವಮಾನ ಅನುಭವಿಸುವಂತಾಗಿದೆ’ ಎಂದು ಕಣ್ಣೀರಿಟ್ಟರು.
‘ಅಂಬರೀಷ್‌ ಅವರ ಮನೆಯಲ್ಲಿ ಭಾಗವಹಿಸಿದ್ದ ನೆನಪಿಗಾಗಿ ಆ ಛಾಯಾಚಿತ್ರವನ್ನು ತೆಗೆಸಿಕೊಂಡಿದ್ದೆ.

ನನ್ನ ತಂದೆಯೇ ಅದನ್ನು ತೆಗೆದಿದ್ದಾರೆ. ಅದೇ ರೀತಿಯ ಛಾಯಾಚಿತ್ರಗಳನ್ನು ನನ್ನ ತಂದೆ, ಮಾವ ರಾಜೇಂದ್ರ­ಸಿಂಗ್‌ ಬಾಬು ಅವರೊಂದಿಗೂ ತೆಗೆಸಿಕೊಂಡಿದ್ದೇನೆ’ ಎನ್ನುತ್ತ ವೈಭವಿ ಭಾವೋದ್ವೇಗದಿಂದ ಅತ್ತರು.

Write A Comment