ಮನೋರಂಜನೆ

ಅಂಧರ ವಿಶ್ವಕಪ್ ವಿಜೇತರಿಗೆ ಅಭಿನಂದನೆ, 5 ಲಕ್ಷ ರೂ. ಪುರಸ್ಕಾರ

Pinterest LinkedIn Tumblr

blind-criketer

ಹೊಸದಿಲ್ಲಿ, ಡಿ.10: ಇತ್ತೀಚೆಗೆ ದಕ್ಷಿಣ ಆಫ್ರಿಕದಲ್ಲಿ ನಡೆದ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದ ಭಾರತದ ಕ್ರಿಕೆಟ್ ತಂಡದ ಪ್ರತಿ ಸದಸ್ಯನಿಗೆ ಕ್ರೀಡಾ ಸಚಿವರಾದ ಸರ್ಬಾನಂದ ಸೊನೊವಾಲ ಬುಧವಾರ ತಲಾ 5 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿದ್ದಾರೆ.

ಡಿ.7 ರಂದು ಕೇಪ್‌ಟೌನ್‌ನಲ್ಲಿ ನಡೆದ ಅಂಧರ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ್ದ ಭಾರತ ಮೊದಲ ಬಾರಿ ವಿಶ್ವಕಪನ್ನು ಮುಡಿಗೇರಿಸಿಕೊಂಡಿತ್ತು. ಬುಧವಾರ ವಿಶ್ವಕಪ್‌ನೊಂದಿಗೆ ಸ್ವದೇಶಕ್ಕೆ ಆಗಮಿಸಿದ್ದ ಭಾರತ ತಂಡಕ್ಕೆ ಅಭಿನಂದನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಸೊನೊವಾಲ ಆಟಗಾರರಿಗೆ 5 ಲಕ್ಷ ರೂ. ಚೆಕನ್ನು ಹಸ್ತಾಂತರಿಸಿದರು.

‘‘ವಿಶ್ವಕಪ್ ಜಯಿಸಿದ ಆಟಗಾರರಿಗೆ ನಾನು ಅಭಿನಂದನೆ ಸಲ್ಲಿಸುವೆನು. ನಮಗೆಲ್ಲರಿಗೂ ಅವರ ಸಾಧನೆಯಿಂದ ಹೆಮ್ಮೆಯಾಗಿದೆ. ಕಠಿಣ ಪರಿಶ್ರಮ ಹಾಗೂ ಸಮರ್ಪಣಾಭಾವದಿಂದ ಆಟಗಾರರು ಈ ಸಾಧನೆ ಮಾಡಿದ್ದಾರೆ’’ ಎಂದು ಸೊನೊವಾಲ ಹೇಳಿದ್ದಾರೆ.

ಇದಕ್ಕೂ ಮೊದಲು ಇಲ್ಲಿನ ಎಜಿಐ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಟಗಾರರು ಹಾಗೂ ಅಧಿಕಾರಿಗಳ ತಂಡವನ್ನು ಕೇಂದ್ರ ಸಂಪುಟ ಸಚಿವರಾದ ತಾವರ್‌ಚಂದ್ ಗೆಹ್ಲೊಟ್, ಅನಂತ್ ಕುಮಾರ್ ಹಾಗೂ ಕ್ರೀಡಾ ಸಚಿವರಾದ ಸೊನೊವಾಲ ಸ್ವಾಗತಿಸಿದರು. ಪ್ರಧಾನಮಂತ್ರಿ ನರೇಂದ್ರಮೋದಿ ವಿಶ್ವಕಪ್ ವೀರರನ್ನು ಭೇಟಿಯಾಗಿ ಅಭಿನಂದಿಸಿದರು.

Write A Comment