ಮುಂಬೈ

ಹ್ಯಾಂಡ್ ಗ್ರೆನೇಡ್ ಮಾದರಿಯ ಅನುಮಾನಾಸ್ಪದ ವಸ್ತು ಪುಣೆ ರೈಲ್ವೆ ನಿಲ್ದಾಣದಲ್ಲಿ ಪತ್ತೆ

Pinterest LinkedIn Tumblr

ಪುಣೆ: ಪುಣೆಯ ರೈಲ್ವೆ ನಿಲ್ದಾಣದಲ್ಲಿ ಹ್ಯಾಂಡ್ ಗ್ರೆನೇಡ್ ಮಾದರಿಯ ಅನುಮಾನಾಸ್ಪದ ವಸ್ತು ಶುಕ್ರವಾರ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕೂಡಲೇ ರೈಲ್ವೇ ಪೊಲೀಸರು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ ಗ್ರೆನೇಡ್ ಮಾದರಿಯ ವಸ್ತುವನ್ನು ನಾಶಪಡಿಸಿದೆ ಮತ್ತು ಅದರ ಭಾಗಗಳನ್ನು ವಿಧಿ ವಿಜ್ಞಾನ ಇಲಾಖೆಗೆ ರವಾನಿಸಿದೆ.

ಶುಕ್ರವಾರ ಮುಂಜಾನೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಕೂಡ ಇದೇ ಮಾದರಿಯ ಅನುಮಾನಾಸಸ್ಪದ ವಸ್ತು ಪತ್ತೆಯಾಗಿತ್ತು . ತನಿಖೆಯೆ ನಂತರ ಬ್ಯಾಗ್ ನಲ್ಲಿದ್ದ ಅನುಮಾನಸ್ಪದ ವಸ್ತು ಆರ್ ಡಿ ಎಕ್ಸ್ ಎಂದು ಪತ್ತೆ ಮಾಡಲಾಗಿತ್ತು.

Comments are closed.