ಮುಂಬೈ

ಐಟಿಸಿಯಿಂದ ಸೂಪರ್- ಲಕ್ಷುರಿ ಚಾಕೊಲೇಟ್ ಬಿಡುಗಡೆ

Pinterest LinkedIn Tumblr

ದೀಪಾವಳಿಗೆ ಇನ್ನೇನು ಎರಡು- ಮೂರು ದಿನ ಬಾಕಿ. ಅದರ ಬೆನ್ನಿಗೇ ತಿಂಗಳ ಆಚೆಗೆ ಕ್ರಿಸ್ ಮಸ್, ಹಿಂದೆ ಹಿಂದೆಯೇ ಹೊಸ ವರ್ಷ ಬರುತ್ತದೆ. ಈ ಸಂದರ್ಭಗಳಿಗೆ ಅಂತಲೇ ಐಟಿಸಿಯಿಂದ ಸೂಪರ್- ಲಕ್ಷುರಿ ಚಾಕೊಲೇಟ್ ಬಿಡುಗಡೆ ಮಾಡುತ್ತಿದ್ದು, Fabelle ಬ್ರ್ಯಾಂಡ್ ಅಡಿಯಲ್ಲಿ ಬರಲಿದೆ. ಇದರ ಬೆಲೆ ತಿಳಿದ ಮೇಲೆ ಈ ಚಾಕೊಲೇಟ್ ಗಳನ್ನು ಯಾರು ಖರೀದಿಸಬಹುದು ಎಂಬುದನ್ನು ನೀವೇ ನಿರ್ಧಾರ ಮಾಡಿ.

ಫೇಬೆಲ್ಲೆ ಟ್ರಿನಿಟಿ- ಟ್ರಫ್ಲೆಸ್ ಎಕ್ಸ್ ಟ್ರಾಡಿನೈರ್ ಚಾಕೊಲೇಟ್ ಒಂದು ಕೇಜಿಗೆ ಅಂದಾಜು ನಾಲ್ಕೂವರೆ ಲಕ್ಷ ರುಪಾಯಿ ಬೆಲೆ ಆಗುತ್ತದೆ. ಹೌದು, ನೀವು ಸರಿಯಾಗಿ ಓದ್ತಾ ಇದ್ದೀರಿ. ನಾಲ್ಕೂವರೆ ಲಕ್ಷ ರುಪಾಯಿಯೇ. ಈ ಚಾಕೊಲೇಟ್ ವಿಶ್ವದಲ್ಲಿಯೇ ಅತ್ಯಂತ ದುಬಾರಿಯದು ಎಂಬ ಅಗ್ಗಳಿಕೆಗೆ ಪಾತ್ರವಾಗಲಿದೆ.

ಜಗತ್ತಿನ ಅತ್ಯುತ್ತಮ ಗುಣಮಟ್ಟದ ಚಾಕೊಲೇಟ್ ತಯಾರಕರಾದ ಐಟಿಸಿ, ಮೊದಲಿಗೆ ಆರ್ಡರ್ ತೆಗೆದುಕೊಂಡು, ಆ ನಂತರ ಉತ್ಪಾದನೆ ಮಾಡಲಿದೆ. ಬುಧವಾರದಿಂದ ಆರ್ಡರ್ ತೆಗೆದುಕೊಳ್ಳಲು ಆರಂಭಿಸಿದೆ. ಜಗತ್ತಿನ ಅತ್ಯಂತ ಅಪರೂಪ ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದ ಕೊಕೋವಾ ಪುಡಿಯನ್ನು ಇದಕ್ಕಾಗಿ ಬಳಸಲಾಗುತ್ತದೆ.

ಮೂರು ವರ್ಷಗಳ ಹಿಂದೆ ಐಟಿಸಿ ಕಂಪೆನಿಯು ಫೇಬೆಲ್ಲೆಯನ್ನು ಆರಂಭಿಸಿತು. ಆ ನಂತರ ಬಾರ್ ಆಕಾರದ ವಿವಿಧ ಶ್ರೇಣಿಯನ್ನು ಮೂನ್ನೂರಾ ಐವತ್ತು ಮತ್ತು ನಾನೂರಾ ತೊಂಬತ್ತೈದು ರುಪಾಯಿ ದರದ ಮಧ್ಯೆ ದೊಡ್ಡ ಅಂಗಡಿಗಳಲ್ಲಿ ಮಾರಲು ಆರಂಭಿಸಿತು. ಇದೀಗ ಹಬ್ಬಕ್ಕೆ 2,450 ಹಾಗೂ 13,750 ರುಪಾಯಿ ಮಧ್ಯೆ ಉಡುಗೊರೆ ರೂಪದಲ್ಲಿ ಬೊಕೆಗಳನ್ನು ನೀಡಲು ಫೇಬೆಲ್ಲೆ ಚಿಂತನೆ ನಡೆಸುತ್ತಿದೆ.

Comments are closed.