ಮುಂಬೈ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಲಿಯಾ,ರಣಬೀರ್ ಮದುವೆ ಕಾರ್ಡ್…?

Pinterest LinkedIn Tumblr

ಮುಂಬಯಿ: ಬಾಲಿವುಡ್ ಸ್ಟಾರ್ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಮದುವೆಯಾಗ್ತಾರೆಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಿದೆ. ಈಗ ಮದುವೆ ಕರೆಯೋಲೆ ಕಾರ್ಡ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಾರ್ಡ್ ನಲ್ಲಿ ಮದುವೆ ಜನವರಿ 22,2020 ಎಂದು ನಮೂದಿಸಲಾಗಿದೆ. ಈ ಕಾರ್ಡ್ ಬಗ್ಗೆ ಈಗ ಆಲಿಯಾ ಪ್ರತಿಕ್ರಿಯೆ ನೀಡಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದ ಆಲಿಯಾಗೆ ಜನವರಿ 22ರಂದು ನೀವು ಮದುವೆಯಾಗ್ತಿದ್ದೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ದೊಡ್ಡದಾಗಿ ನಕ್ಕ ಆಲಿಯಾ, ಮದುವೆ ಬಗ್ಗೆ ಪ್ರತಿಕ್ರಿಯೆ ನೀಡದೆ ಹೋಗಿದ್ದಾರೆ. ಆದ್ರೆ ಈ ಕಾರ್ಡ್ ನಕಲಿ ಎನ್ನಲಾಗ್ತಿದೆ.

ಕರೆಯೋಲೆ ಕಾರ್ಡ್ ನಲ್ಲಿ ಕೆಲವು ತಪ್ಪುಗಳಿವೆ. ಆಲಿಯಾ ತಂದೆ ಹೆಸರನ್ನು ಸರಿಯಾಗಿ ಬರೆದಿಲ್ಲ. ಮಹೇಶ್ ಭಟ್ ಬದಲು ಮುಖೇಶ್ ಭಟ್ ಎಂದು ಬರೆಯಲಾಗಿದೆ. ಇದು ನಕಲಿ ಕಾರ್ಡ್ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಸದ್ಯ ಆಲಿಯಾ ಹಾಗೂ ರಣಬೀರ್ ʼಬ್ರಹ್ಮಾಸ್ತ್ರʼ ಚಿತ್ರದಲ್ಲಿ ಬ್ಯುಸಿಯಿದ್ದು, ಇದೇ ಮೊದಲ ಬಾರಿ ತೆರೆ ಮೇಲೆ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

Comments are closed.