ಮುಂಬೈ

ಯುವತಿಯ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿದ ಯುವಕ ಮಾಡಿದ್ದೇನು ಗೊತ್ತೇ…?

Pinterest LinkedIn Tumblr

ಮುಂಬೈ: ತನಗಿಂತ ಐದು ವರ್ಷ ಹಿರಿಯಳಾದ ಯುವತಿ ಜೊತೆ ಲೈವ್ ವಿಡಿಯೋ ಕಾಲ್ ಮಾಡಿದ ಯುವಕನೋರ್ವ ಆಕೆಯ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಆಕೆಯ ಸ್ನೇಹಿತರಿಗೆ ಮಾರಲು ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈನ ಪೊವಾಯಿಯಲ್ಲಿ ಈ ಘನಟೆ ನಡೆದಿದ್ದು ಬಂಧಿತ ಆರೋಪಿಯನ್ನು 19 ವರ್ಷದ ಜಿತನ್ ಎಂದು ಗುರುತಿಸಲಾಗಿದೆ. ಜಿತನ್ ತಾನು ಓದುತ್ತಿದ್ದ ಕಾಲೇಜಿನಲ್ಲೇ ಓದುತ್ತಿದ್ದ 24 ವರ್ಷದ ಯುವತಿ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹ ಸಂಪಾದಿಸಿದ್ದ.

ನಂತರ ಆಕೆಯೊಂದಿಗೆ ಚಾಟ್ ಮಾಡುತ್ತಿದ್ದ ಸ್ವಲ್ಪ ದಿನ ಹೀಗೆ ಮುಂದುವರೆಯಿತು. ಆಕೆಯೊಂದಿಗೆ ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದ. ಒಂದು ದಿನ ಲೈವ್ ವಿಡಿಯೋ ಕಾಲ್ ಮಾಡಿದ್ದ ಜಿತನ್ ಬಟ್ಟೆ ತೆಗೆಯುವಂತೆ ಹೇಳಿದ್ದಾನೆ. ಈ ವೇಳೆ ಯುವತಿಯ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ.

ಇದೇ ವಿಡಿಯೋವನ್ನು ಯುವತಿಯ ಸ್ನೇಹಿತರಿಗೆ ದುಡ್ಡಿಗೆ ಮಾರಲು ಮುಂದಾಗಿದ್ದಾನೆ. ಸ್ನೇಹಿತರಿಂದ ವಿಷಯ ತಿಳಿದ ಯುವತಿ ಪೊಲೀಸರಿಗೆ ದೂರು ನೀಡಿದ್ದು ದೂರಿನನ್ವಯ ಸದ್ಯ ಪೊಲೀಸರು ಜಿತನ್ ನನ್ನ ಬಂಧಿಸಿದ್ದಾರೆ.

Comments are closed.