ಮನೋರಂಜನೆ

ಮುಂಬಯಿಯಲ್ಲಿ ಕೈದಿಗಳಿಂದ ರೇಡಿಯೋ ಚಾನಲ್!

Pinterest LinkedIn Tumblr


ಮುಂಬಯಿ: ಜೈಲಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವ ಕೈದಿಗಳ ಮನಸ್ಸನ್ನು ಪ್ರಫುಲ್ಲಗೊಳಿಸಲು ಮುಂಬಯಿಯ ತಲೋಜಾ ಸೆಂಟ್ರಲ್ ಜೈಲಿನಲ್ಲಿ ಹೊಸ ರೇಡಿಯೋ ಚಾನಲ್ ಆರಂಭಿಸಲಾಗಿದ್ದು, ಕೈದಿಗಳೇ ಅದನ್ನು ನಿರ್ವಹಿಸುತ್ತಾರೆ. ಇದಕ್ಕೆ ಸ್ಫೂರ್ತಿಯಾಗಿದ್ದು ಬಾಲಿವುಡ್ ನಟ ಸಂಜಯ್ ದತ್!

ಸಂಜಯ್ ದತ್ ಮುಂಬಯಿಯ ಯೇರವಾಡ ಸೆಂಟ್ರಲ್ ಜೈಲಿನಲ್ಲಿದ್ದ ಸಂದರ್ಭ ರೇಡಿಯೋ ಕಾರ್ಯಕ್ರಮ ನಡೆಸುತ್ತಿದ್ದರು. ಜೈಲಿನಲ್ಲಿ ಕೈದಿಗಳಿಗೆ ವಿವಿಧ ಕೆಲಸ ಕಾರ್ಯ, ತರಬೇತಿ ನಡೆಯುತ್ತವೆ. ಅದರ ಜತೆಗೇ ರೇಡಿಯೋ ಚಾನಲ್ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಕೈದಿಗಳ ಇಚ್ಛೆಯಂತೆ ಚಾನಲ್ ಆರಂಭಿಸಲಾಗಿದೆ.

ಪ್ರತಿದಿನ ಮಧ್ಯಾಹ್ನ 12-1ರಿಂದ ರವರೆಗೆ ರೇಡಿಯೋ ಕಾರ್ಯಕ್ರಮವಿದ್ದು, ಜೈಲಿನಲ್ಲಿ ಆರಂಭವಾದ ಮೊದಲ ರೇಡಿಯೋ ಕೇಂದ್ರವಾಗಿದೆ.
ಸ್ಫೂರ್ತಿದಾಯಕ ಮಾತು, ಕಿಶೋರ್ ಕುಮಾರ್ ಗಾಯನದ ಪದ್ಯಗಳು, ಜೀವನ ಪಾಠ ಕುರಿತು ಕಾರ್ಯಕ್ರಮ ವೈವಿಧ್ಯವನ್ನು ಕೈದಿಗಳು ಪ್ರಸ್ತುತಪಡಿಸುತ್ತಿದ್ದು, ಹಿಂದಿನ ದಿನವೇ ಅಧಿಕಾರಿಗಳು ಕಾರ್ಯಕ್ರಮ ಪಟ್ಟಿ ನೋಡಿ, ಅಂತಿಮಗೊಳಿಸಿದ ಬಳಿಕ ಅವುಗಳನ್ನು ರೆಕಾರ್ಡ್ ಮಾಡಿ, ಮರುದಿನ ಪ್ರಸಾರ ಮಾಡಲಾಗುತ್ತದೆ.

ರೇಡಿಯೋ ಕಾರ್ಯಕ್ರಮದ ಸ್ಟ್ರಿಪ್ಟ್, ರೆಕಾರ್ಡಿಂಗ್ ಮತ್ತು ಪ್ರಸಾರವನ್ನು ಕೈದಿಗಳೇ ನಿರ್ವಹಿಸುವುದು ವಿಶೇಷ. ರೇಡಿಯೋ ಕೇಂದ್ರ ಆರಂಭಕ್ಕೂ ಮೊದಲು ಕೈದಿಗಳ ತಂಡಕ್ಕೆ ಈ ಕುರಿತು ತರಬೇತಿ ನೀಡಲಾಗಿದೆ.

Comments are closed.