ಮುಂಬೈ: ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ವಿಜೃಂಭಣೆಯಿಂದ ನಡೆದಿದೆ.
ಈ ಮೂಲಕ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರ ಮದುವೆಯು ಭಾರತದಲ್ಲಿ ನಡೆದ ಅತೀ ದುಬಾರಿ ಮದುವೆಗಳಲ್ಲಿ ಒಂದಾಗಿದೆ.
ಈ ಅದ್ದೂರಿ ಮದುವೆಗೆ ಬಚ್ಚನ್ ಕುಟುಂಬದವರು, ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಆಮೀರ್ ಖಾನ್, ಸಚಿನ್ ತೆಂಡೂಲ್ಕರ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಸೇರಿದಂತೆ ಹಲವು ಖ್ಯಾತ ನಟ-ನಟಿಯರು, ಕ್ರೀಡಾಪಟುಗಳು, ರಾಜಕಾರಣಿಗಳು ಆಗಮಿಸಿ ನವ ವಧುವರರಿಗೆ ಶುಭಹಾರೈಸಿದರು. ಹಾಗೆಯೇ ಬಿಟೌನ್ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ, ನಿಕ್ ಜೋನ್ಸ್ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಯುವ ಉದ್ಯಮಿ ಆನಂದ್ ಪಿರಾಮಾಲ್ ಹಾಗೂ ಇಶಾ ಅಂಬಾನಿ ಇಬ್ಬರು ಬಾಲ್ಯದ ಸ್ನೇಹಿತರು. ಅಲ್ಲದೆ ಇಬ್ಬರು ಖ್ಯಾತ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಅಜಯ್ ಪಿರಾಮಾಲ್ ಅವರ ಮಕ್ಕಳು. ಎರಡು ಉದ್ಯಮಿಗಳು ಸೇರಿ ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.
Comments are closed.