ಮುಂಬೈ

ನೀರವ್‌ ಮೋದಿಯ ಆಲಿಬಾಗ್‌ ಬೀಚ್‌ ಬಂಗಲೆ ಕೆಡಹಲು ಆದೇಶ

Pinterest LinkedIn Tumblr


ಮುಂಬಯಿ : 23,000 ಕೋಟಿ ರೂ. ಬ್ಯಾಂಕ್‌ ವಂಚನೆಗೈದು ವಿದೇಶಕ್ಕೆ ಪರಾರಿಯಾಗಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿಯ ರಾಯಗಢ ಜಿಲ್ಲೆಯ ಆಲಿಬಾಗ್‌ನಲ್ಲಿ ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ಐಷಾರಾಮಿ ಬೀಚ್‌ ಬಂಗಲೆಯನ್ನು ಕೆಡಹಲು ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿದೆ.

ನೀರವ್‌ ಮೋದಿ ಮಾತ್ರವಲ್ಲದೆ ರಾಜ್ಯದ ಕಟ್ಟಡ ನಿರ್ಮಾಣ ನಿಯಮಗಳನ್ನು ಕರಾವಳಿ ವಲಯ ನಿಯಮಗಳ ಉಲ್ಲಂಘನೆಗೈದು ಬಂಗಲೆಗಳನ್ನು ನಿರ್ಮಿಸಿಕೊಂಡಿರುವ ಇನ್ನೂ 58 ಮಂದಿ ಖಾಸಗಿ ಆಸ್ತಿಪಾಸ್ತಿ ಮಾಲಕರಿಗೆ ಕೂಡ ಅವರ ಅಕ್ರಮ ಕಟ್ಟಡಗಳನ್ನು ಕೆಡಹುವುದಕ್ಕೆ ನೊಟೀಸ್‌ ಜಾರಿ ಮಾಡಲಾಗಿದೆ ಎಂದು ಸರಕಾರಿ ವಕೀಲ ಪಿ ಬಿ ಕಾಕಡೆ ಅವರು ಚೀಫ್ ಜಸ್ಟಿಸ್‌ ನರೇಶ್‌ ಪಾಟೀಲ್‌ ಮತ್ತು ಜಸ್ಟಿಸ್‌ ಎಂ ಎಸ್‌ ಕಾರ್ಣಿಕ್‌ ಅವರನ್ನು ಒಳಗೊಂಡ ಬಾಂಬೆ ಹೈಕೋರ್ಟ್‌ ಪೀಠಕ್ಕೆ ತಿಳಿಸಿದರು.

ಪೀಠವು ಈ ಹಿಂದೆ ಈ ಸಂಬಂಧ ‘ಕ್ರಮ ತೆಗೆದುಕೊಂಡ ವರದಿ’ಯನ್ನು ಸಲ್ಲಿಸುವಂತೆ ಸರಕಾರಕ್ಕೆ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಅಕ್ರಮ ಕಟ್ಟಡ ಕೆಡಹುವ ನೊಟೀಸನ್ನು ಆಯಾ ಆಸ್ತಿಪಾಸ್ತಿಗಳ ಮಾಲಕರಿಗೆ ಜಾರಿ ಮಾಡಲಾಗಿದೆ ಎಂದು ಸರಕಾರಿ ವಕೀಲರು ಹೇಳಿದರು.

ರಾಯಗಢ ಜಿಲ್ಲೆಯ ಆಲಿಬಾಗ್‌ ಬೀಚ್‌ ಪಟ್ಟಣವು ದೇಶ-ವಿದೇಶಗಳ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿರುವುದರಿಂದಲೇ ಇಲ್ಲಿ ಸಮುದ್ರಕ್ಕೆ ಮುಖಮಾಡಿಕೊಂಡಿರುವ ಭಾರೀ ದೊಡ್ಡ ಕುಳಗಳ ಬಂಗಲೆಗಳು ಸಾಕಷ್ಟು ಸಂಖ್ಯೆಯಲ್ಲಿವೆ.

Comments are closed.