ಮುಂಬೈ

ಮೊದಲ ಎರಡು ಮದುವೆಗಳಿಗೆ ಯೋಚಿಸಿ ನಿರ್ಧಾರ ಕೈಗೊಳ್ಳಲು ಸಮಯವಿರಲಿಲ್ಲ! ಇದು ಮೂರನೇ ಮದುವೆ ಎಂದರು ರಾಹುಲ್

Pinterest LinkedIn Tumblr


ಮುಂಬಯಿ: ಮೊದಲಿನ ಎರಡು ಮದುವೆ ಕೂಡ ತುಂಬಾ ತರಾತುರಿಯಲ್ಲಿ ಆಯಿತು. ಯೋಚಿಸಿ ನಿರ್ಧಾರ ಕೈಗೊಳ್ಳಲು ಸಮಯವಿರಲಿಲ್ಲ. ಇದು ನನ್ನ ಮೂರನೇ ಮದುವೆ. ಇಬ್ಬರೂ ಇಷ್ಟಪಟ್ಟು, ಯೋಚಿಸಿ ನಿರ್ಧಾರ ಕೈಗೊಂಡಿದ್ದೇವೆ ಎಂದು ರಾಹುಲ್ ಮಹಾಜನ್ ತಮ್ಮ ಮೂರನೇ ಮದುವೆಯ ವಿಚಾರ ಬಹಿರಂಗಪಡಿಸಿದ್ದಾರೆ.

ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿಗೆ ಬಂದ ರಾಹುಲ್, ಕೇಂದ್ರದ ಮಾಜಿ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರ. ರಾಹುಲ್ ಪ್ರಸ್ತುತ ಮಲಬಾರ್ ಹಿಲ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಕಜಕಿಸ್ತಾನ ಮೂಲದ ನತಾಲಿಯಾ ಇಲಿನಾ ಎಂಬ ರೂಪದರ್ಶಿಯನ್ನು ಮದುವೆಯಾಗಿದ್ದಾರೆ.

ಇಬ್ಬರೂ ಗೆಳೆಯರ ಮೂಲಕ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಜತೆಯಾಗಿದ್ದರು. ಮದುವೆಯ ವಿಚಾರ ಮುಚ್ಚಿಟ್ಟಿದ್ದ ರಾಹುಲ್, ವಿವಾಹ ವಾರ್ಷಿಕೋತ್ಸವದ ದಿನ ಬಹಿರಂಗಪಡಿಸುವ ಇಚ್ಛೆ ಹೊಂದಿದ್ದರು.

ಈಗಾಗಲೇ ಎರಡು ಮದುವೆ ಆಗಿ ಮುರಿದುಬಿದ್ದ ನಂತರ, ಮೂರನೇ ಮದುವೆ ಬಗ್ಗೆ ಜನರು ಗಾಸಿಪ್ ಮಾಡುತ್ತಾರೆ ಎಂದರಿತ ಅವರು, ಮದುವೆ ವಿಚಾರ ಬಹಿರಂಗಪಡಿಸಿರಲಿಲ್ಲ.

ಈ ಮೊದಲು ಶ್ವೇತಾ ಸಿಂಗ್ ಮತ್ತು ಡಿಂಪಿ ಗಂಗೂಲಿ ಜತೆ ಮದುವೆಯಾಗಿದ್ದ ರಾಹುಲ್, ನಂತರ ಮದುವೆ ಮುರಿದುಕೊಂಡಿದ್ದರು. ಒಂಟಿಯಾಗಿದ್ದುಕೊಂಡು ಬೇಸರವಾಯ್ತು. ಹೀಗಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

Comments are closed.