ಮುಂಬೈ

ನಗರ ನಕ್ಸಲ್ ಆರೋಪ: ಅರುಣ್ ಫೆರೀರಾ, ವೆರ್ನಾನ್ ಗೃಹ ಬಂಧನ ವಿಸ್ತರಣೆಗೆ ಬಾಂಬೆ ಹೈಕೋರ್ಟ್ ನಕಾರ

Pinterest LinkedIn Tumblr


ನವದೆಹಲಿ: ಬಾಂಬೆ ಹೈಕೋರ್ಟ್ ಹೋರಾಟಗಾರರಾದ ಅರುಣ್ ಫೆರೀರಾ ಮತ್ತು ವೆರ್ನಾನ್ ಗೊನ್ಸಾಲ್ವ್ಸ್ಗೆ ಗೃಹಬಂಧನವನ್ನು ವಿಸ್ತರಿಸಲು ನಿರಾಕರಿಸಿದೆ.

ಇಂದು ಅವರ ಗೃಹ ಬಂಧನದ ಅವಧಿ ಮುಗಿದ ಹಿನ್ನಲೆಯಲ್ಲಿ ಅದನ್ನು ಮತ್ತೆ ಏಳು ದಿನಗಳ ಕಾಲ ವಿಸ್ತರಿಸಬೇಕೆಂದು ಪುಣೆಯ ಸೆಶನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.ಈಗ ಅವರನ್ನು ಸುಪ್ರಿಂ ಕೋರ್ಟ್ ನ ಆದೇಶದ ಅನ್ವಯವಾಗಿ ಪುಣೆ ಪೊಲೀಸರು ಬಂಧಿಸಬಹುದು ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಲ್ಲದೆ ಬಾಂಬೆ ಹೈಕೋರ್ಟ್ ಗೌತಮ್ ನವಲಾಖಾ ಮತ್ತು ಆನಂದ್ ತೆಲ್ತುಂಬೆ ಭೀಮಾ ಕೊರೆಗಾಂ ಪ್ರಕರಣದಲ್ಲಿನ ಎಫ್ಐಆರ್ ಅನ್ನು ನವಂಬರ್ 1 ರ ತಿರಸ್ಕರಿಸಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.ಇನ್ನೊಂದೆಡೆ ಇದೆ ಗುರುವಾರದಂದು ಹೈದರಾಬಾದ್ ಹೈಕೋರ್ಟ್ ಮಾನವ ಹಕ್ಕು ಹೋರಾಟಗಾರ ವರರಾರಾ ರಾವ್ ಗೆ ಮೂರು ವಾರಗಳ ಕಾಲ ಗೃಹಬಂಧನವನ್ನು ವಿಸ್ತರಿಸಿದೆ.

ಕಳೆದ ತಿಂಗಳು ಭೀಮಾ ಕೊರೆಗಾಂ ನಲ್ಲಿ ಹಿಂಸಾಚಾರಕ್ಕೂ ಮೊದಲು ಎಲ್ಗರ್ ಪರಿಷತ್ ಮೂಲಕ ಸಭೆಯನ್ನು ನಡೆಸಲಾಗಿತ್ತು ಇದಾದ ನಂತರ ಈ ಮಾವೋವಾದಿಗಳ ಸಂಪರ್ಕವಿದೆ ಎಂದು ಮಾನವ ಹಕ್ಕು ಕಾರ್ಯಕರ್ತರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದರು.

Comments are closed.