ಮುಂಬೈ

ವಿವಾಹಿತ ಮಾಜಿ ಸಹೋದ್ಯೋಗಿ ಮೇಲೆ ಅತ್ಯಾಚಾರ: ಬ್ಯಾಂಕ್ ಉದ್ಯೋಗಿ ಬಂಧನ

Pinterest LinkedIn Tumblr


ಮುಂಬಯಿ: ಮಾಜಿ ಸಹೋದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು 38 ವರ್ಷದ ಬ್ಯಾಂಕ್ ಉದ್ಯೋಗಿಯನ್ನು ಬಂಧಿಸಿದ್ದಾರೆ.

ಲೋವರ್ ಪರೇಲ್ ನಿವಾಸಿಯಾಗಿರುವ ವಿಲಾಸ್ ಕೃಷ್ಣ ಕದಂ ಬಂಧಿತ ಆರೋಪಿಯಾಗಿದ್ದು, ಆತನ ಮೇಲೆ ಅತ್ಯಾಚಾರ, ಹಲ್ಲೆ, ಬೆದರಿಕೆ, ಉದ್ದೇಶಪೂರ್ವಕ ಅವಮಾನ ಆರೋಪಗಳನ್ನು ಹೇರಲಾಗಿದೆ. ಸಂತ್ರಸ್ತೆಯ ಭಾವಚಿತ್ರಗಳಿದ್ದ ಮೊಬೈಲ್‌ನ್ನು ಕೂಡ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2008ರಲ್ಲಿ ಪ್ರಥಮ ಬಾರಿ ನಾನು ವಿಲಾಸ್‌ನನ್ನು ಪ್ರಥಮ ಬಾರಿಗೆ ಭೇಟಿಯಾಗಿದ್ದೆ. ನಾವಿಬ್ಬರು ಒಂದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೆವು. 2013ರಿಂದ 2015ರ ಅವಧಿಯಲ್ಲಿ ನಮ್ಮ ನಡುವೆ ಪರಸ್ಪರ ಒಪ್ಪಿಗೆಯ ದೈಹಿಕ ಸಂಪರ್ಕವಿತ್ತು. 2017ರಲ್ಲಿ ನಾನು ಬೇರೊಬ್ಬನನ್ನು ಮದುವೆಯಾದೆ. ಮದುವೆಗೆ ಕೆಲ ತಿಂಗಳ ಹಿಂದೆ ನಮ್ಮಿಬ್ಬರ ಸಂಬಂಧವನ್ನು ಮುಗಿಸಲು ಬಯಸುತ್ತೇನೆ ಎಂದು ವಿಲಾಸ್ ಬಳಿ ಹೇಳಿದ್ದೆ. ಆದರಾತ ನಿರಾಕರಿಸಿದ. ಕೊನೆಯದಾಗಿ ಮಾತಾಡಬೇಕು ಎಂದು ಹೇಳಿ ದಾದರ್‌ನಲ್ಲಿರುವ ಲಾಡ್ಜ್ ಒಂದಕ್ಕೆ ಕರೆದು ನನ್ನ ಮೇಲೆ ಅತ್ಯಾಚಾರ ಎಸಗಿದಎಂದು ಸಂತ್ರಸ್ತೆ ದೂರಿದ್ದಾಳೆ.

ಮದುವೆ ಬಳಿಕ ಸಹ ನನಗೆ ಫೋನ್ ಕರೆ ಮಾಡುತ್ತಿದ್ದ ವಿಲಾಸ್, ದೈಹಿಕ ಸಂಪರ್ಕಕ್ಕಾಗಿ ಆಹ್ವಾನಿಸುತ್ತಿದ್ದ. ನಿರಾಕರಿಸಿದರೆ ನಿನ್ನ ಗಂಡನಿಗೆ ಹೇಳುವುದಾಗಿ ಹೇಳುತ್ತಿದ್ದ. ಬೆತ್ತಲೆ ಫೋಟೋಗಳನ್ನು ಕಳಿಸಿ ಹೆದರಿಸುತ್ತಿದ್ದ. ಕೊನೆಗೆ ಪತಿಯ ಮೊಬೈಲ್ ಸಂಖ್ಯೆಯನ್ನು ಸಹ ಪಡೆದುಕೊಂಡು ಬೆದರಿಸಿ ಬೇರೆ ಬೇರೆ ಹೊಟೇಲ್‌ಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಎಂದಾಕೆ ಅಳಲು ತೋಡಿಕೊಂಡಿದ್ದಾಳೆ.

ಇದೆಲ್ಲದರಿಂದ ನೊಂದ ಆಕೆ ಆತ್ಮಹತ್ಯೆಗೆ ಯೋಚಿಸಿದ್ದಳು. ಆದರೆ ಈಗ ಪೊಲೀಸ್ ಅಧಿಕಾರಿಯಾಗಿರುವ ಕಾಲೇಜು ಸ್ನೇಹಿತರ ಸಲಹೆಯ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು ಎಂದು ತಿಳಿದು ಬಂದಿದೆ.

Comments are closed.