ಮುಂಬೈ

ದಾಬೋಲ್ಕರ್ ಹತ್ಯೆ ಪ್ರಕರಣ: ಸಿಬಿಐ ಕಸ್ಟಡಿಗೆ ಅಮೋಲ್ ಕಾಳೆ

Pinterest LinkedIn Tumblr


ಮುಂಬಯಿ: ಗೌರಿ ಲಂಕೇಶ್‌ ಹತ್ಯೆ ಕೇಸಿನ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಕಾಳೆ ಕೈವಾಡವಿದೆಯೆಂಬ ಆರೋಪ ಕೇಳಿಬಂದ ಹಿನ್ನೆಲೆ ಮಹಾರಾಷ್ಟ್ರ ಪೊಲೀಸರು ಆತನನ್ನು ಬೆಂಗಳೂರಿನಿಂದ ಪುಣೆಗೆ ಕರೆದೊಯ್ದಿದ್ದಾರೆ.

ಆರೋಪಿ ಅಮೋಲ್‌ ಕಾಳೆಯನ್ನು ಪುಣೆ ಸೆಷನ್‌ ನ್ಯಾಯಾಲಯ ಸೆಪ್ಟೆಂಬರ್‌ 14 ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಸಿಬಿಐ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದ ಅಧಿಕಾರಿಗಳು, ಇಂದು ಬೆಳಗ್ಗೆ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಆತನನ್ನು ಬೆಂಗಳೂರಿನಿಂದ ನಿನ್ನೆ ಮುಂಬಯಿಗೆ ವಿಮಾನದ ಮೂಲಕ ಕರೆದೊಯ್ಯಲಾಗಿತ್ತು. ನಂತರ, ಇಂದು ಬೆಳಗ್ಗೆ ಕೆಲ ಕಾಲ ವಿಚಾರಣೆ ನಡೆಸಿದ ಬಳಿಕ ಆತನದ ಬಂಧನದ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.