ಮುಂಬೈ

ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಉಪ ಪ್ರಾಂಶುಪಾಲ ಆತ್ಮಹತ್ಯೆ

Pinterest LinkedIn Tumblr


ಮುಂಬಯಿ: 48 ವರ್ಷದ ಉಪಪ್ರಾಂಶುಪಾಲರೊಬ್ಬರು ತಾವು ಸೇವೆ ಸಲ್ಲಿಸುತ್ತಿದ್ದ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ ಘಟನೆ ಅಂಧೇರಿಯಲ್ಲಿ ನಡೆದಿದೆ.

ಮುಂಜಾನೆ 8 ಗಂಟೆ ಸುಮಾರಿಗೆ ರಾಮ್ ಕಾಂಬ್ಳೆ ರಕ್ತದ ಮಡುವಿನಲ್ಲಿ ಬಿದ್ದಿರುವದನ್ನು ನೋಡಿದ ಶಾಲೆಯ ಕಾವಲುಗಾರ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಡಿ ಎನ್ ನಗರ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರ್ಸೋವಾ ನಿವಾಸಿಯಾಗಿದ್ದ ಕಾಂಬ್ಳೆ ತನ್ನ ಸಾವಿಗೆ ಯಾರು ಕಾರಣರಲ್ಲ. ಕೌಟುಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿರುವ ನನ್ನ ಸ್ವಯಂ ನಿರ್ಧಾರವಿದು ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ .

ಕಾಂಬ್ಳೆ ಮತ್ತು ಪತ್ನಿ ವಿಚ್ಛೇದನ ಪಡೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ.

ಉತ್ಸಾಹದ ಬುಗ್ಗೆಯಂತಿದ್ದ ಕಾಂಬ್ಳೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅವರ ಸ್ನೇಹಿತರು ಆಘಾತ ವ್ಯಕ್ತಪಡಿಸಿದ್ದಾರೆ.

Comments are closed.