ಆರೋಗ್ಯ

ಹೀರೇಕಾಯಿ ಸೇವನೆಯಿಂದ ಯಾವೆಲ್ಲಾ ಸಮಸ್ಯೆ ನಿವಾರಣೆ ಸಾದ್ಯ.. ತಿಳಿಯಬೇಕೆ…?

Pinterest LinkedIn Tumblr

ಮಾಮೂಲಿಯಾಗಿ ಆದರೆ ಹೀರೇಕಾಯಿ ತಿನ್ನಬೇಕೆಂದರೆ ತುಂಬಾ ಮಂದಿ ಇಷ್ಟಪಡಲ್ಲ. ಮುಖ ಒಂಥರಾ ಮಾಡ್ತಾರೆ. ಅಯ್ಯೋ ಈವತ್ತೂ ಹೀರೇಕಾಯಾ? ಅಂತಾರೆ. ಆದರೆ ಹೀರೇಕಾಯಿ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅಂತಿದ್ದಾರೆ ವೈದ್ಯರು. ಹೀರೇಕಾಯಿ ನಮ್ಮ ಆಹಾರದಲ್ಲಿ ಕಡ್ಡಾಯವಾಗಿ ಇರಬೇಕಾದ ತರಕಾರಿ ಅಂತಿದ್ದಾರೆ ವೈದ್ಯರು. ಹೀರೇಕಾಯಲ್ಲಿ ಸಹಜವಾಗಿರುವ ನಾರಿನ ಅಂಶದಲ್ಲಿ ಅದೆಷ್ಟೋ ಪ್ರಯೋಜನ ಗಳಿವೆಯಂತೆ. ಇನ್ನೂ ಏನೇನು ಲಾಭ ಅಂತ ನೋಡೋಣ ಬನ್ನಿ…

ಹೀರೇಕಾಯಿಯ ಪ್ರಯೋಜನಗಳು
– ಇದು ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ವಿಟಮಿನ್‌-ಸಿ, ಸತು, ಕಬ್ಬಿಣಾಂಶ, ರೈಬೋಫ್ಲಾವಿನ್‌, ಮೆಗ್ನೇಶಿಯಂ, ಥಯಾಮಿನ್‌ ಹೊಂದಿರುವ ತರಕಾರಿ.
– ಇದು ಕಡಿಮೆ ಸ್ಯಾಚುರೇಟೆಡ್‌ ಫ್ಯಾಟ್‌, ಕೊಲೆಸ್ಟ್ರಾಲ್‌ ಮತ್ತು ಕ್ಯಾಲೊರಿ ಹೊಂದಿದೆ. ಸಾಕಷ್ಟು ಸೆಲ್ಯುಲೋಸ್‌ ಮತ್ತು ನೀರಿನಂಶ ಹೊಂದಿದ್ದು, ಮಲಬದ್ಧತೆಯಿಂದ ಮುಕ್ತಿ ಕೊಡುವುದಲ್ಲದೆ, ಪೈಲ್ಸ್‌ ತಡೆಗಟ್ಟುತ್ತದೆ.
– ಮೂತ್ರ ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಪೆಪ್ಟೆ„ಡ್ಸ್‌, ಆಲ್ಕಲಾಯಿಡ್ಸ್‌ ನಂಥ ಇನ್ಸುಲಿನ್‌ ಅಂಶ ಹೊಂದಿರುತ್ತದೆ.
– ಹೀರೇಕಾಯಿಯು ರಕ್ತ ಶುದ್ಧಿಗೆ ಸಹಾಯಕ. ಯಕೃತ್‌ನ ಆರೋಗ್ಯವನ್ನು ಇದು ಹೆಚ್ಚಿಸುವುದಲ್ಲದೆ, ಯಕೃತ್‌ನ್ನು ಆಲ್ಕೋಹಾಲ್‌ನಿಂದ ರಕ್ಷಿಸುತ್ತದೆ.
– ಹೀರೇಕಾಯಿಯ ಜ್ಯೂಸ್‌ನ್ನು ಜಾಂಡಿಸ್‌ ಗುಣಪಡಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
– ಮೊಡವೆಗಳನ್ನು ನಿವಾರಿಸುವುದರಿಂದ ಚರ್ಮದ ಆರೈಕೆಗೂ ಉತ್ತಮ. ಆ್ಯಸಿಡಿಟಿ, ಅಲ್ಸರ್‌ ಕಡಿಮೆ ಮಾಡುವ ಹೀರೇಕಾಯಿ, ಉರಿಮೂತ್ರ ಶಮನಕ್ಕೂ ಹೆಸರುವಾಸಿ.
– ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವ ಶಕ್ತಿಯೂ ಇದಕ್ಕಿದೆ. ಇದರಲ್ಲಿರುವ ವಿಟಮಿನ್‌ ಎ ಅಂಧತ್ವಕ್ಕೆ ಕಾರಣವಾಗುವ ಮಸ್ಕ್ಯುಲಾರ್‌ ಡಿಜನರೇಶನ್‌ನ್ನು ತಡೆಯುತ್ತದೆ. ಉತ್ತಮ ದೃಷ್ಟಿಗೆ ಸಹಾಯಕವಾದ ಬೀಟಾ ಕೆರೋಟಿನ್‌ ಅಂಶವನ್ನು ಹೀರೆ ಒಳಗೊಂಡಿದೆ.
– ಅಷ್ಟೇ ಅಲ್ಲ- ಮ್ಯಾಂಗನೀಸ್‌ ಅಂಶವು ಗ್ಲೂಕೋನಿಯೋಜಿನೇಸಿಸ್‌ ಎನ್ನುವ ಪ್ರಕ್ರಿಯೆಗೆ ಕಾರಣವಾದ ಜೀರ್ಣಕಾರಕ ಕಿಣ್ವಗಳ ಉತ್ಪಾದನೆಗೆ ಅವಶ್ಯ. ಹೀರೆಯಲ್ಲಿರುವ ಮ್ಯಾಂಗನೀಸ್‌ ಅಂಶದಿಂದ ಇನ್ಸುಲಿನ್‌ ಸ್ರವಿಕೆ ಹೆಚ್ಚಾಗುವುದಲ್ಲದೆ, ಮೈಟೋಕಾಂಡ್ರಿ ಯಾದ ಕಾರ್ಯ ಚಟುವಟಿಕೆ ಉತ್ತೇಜನಗೊಳ್ಳುತ್ತದೆ.

ಇದು ಸುಲಭವಾಗಿ ಜೀರ್ಣವಾಗುತ್ತದೆ. ಆ ಬಳಿಕ ಮಲಬದ್ಧತೆ, ಜೀರ್ಣ ಸಂಬಂಧಿ ಸಮಸ್ಯೆಗಳು ಮಾಯವಾಗುತ್ತವೆ.
ಹೀರೇಕಾಯಲ್ಲಿ ನೀರಿನ ಅಂಶ ಹೆಚ್ಚಾಗಿರುವ ಕಾರಣ ಮಲಬದ್ಧತೆ ಬರದಂತೆ, ಮೂಲವ್ಯಾಧಿ ಇರುವವರಿಗೆ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
ಇದರಲ್ಲಿನ ಬೀಟಾ ಕೆರೋಟಿನ್ ಎಂಬ ಪದಾರ್ಥ ರಕ್ತವನ್ನು ಶುದ್ಧಗೊಳಿಸುತ್ತದೆ, ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.
ಅಷ್ಟೇ ಅಲ್ಲದೆ ಇದು ಲಿವರ್, ಹೃದಯದ ಕೆಲಸವನ್ನು ಇನ್ನಷ್ಟು ಉತ್ತಮ ಪಡಿಸುತ್ತದೆ.
ಹೀರೇಕಾಯಲ್ಲಿ ಕೊಬ್ಬು, ಕೊಲೆಸ್ಟರಾಲ್ ಅಂಶ ಕಡಿಮೆ ಇರುವ ಕಾರಣ ತೂಕ ಕಡಿಮೆಯಾಗಬೇಕು ಎಂದಿರುವವರಿಗೆ ಇದು ಉತ್ತಮ ಆಹಾರ. ಹಸಿವನ್ನು ನೀಗಿಸುತ್ತಾ ತೂಕ ಕಡಿಮೆಯಾಗಲು ಹೀರೇಕಾಯಿ ಒಳ್ಳೆಯದು ಅಂತಿದ್ದಾರೆ ವೈದ್ಯರು. ಇನ್ನು ನಿತ್ಯ ಒಂದು ಗ್ಲಾಸ್ ಹೀರೇಕಾಯಿ ಜ್ಯೂಸ್ ಕುಡಿದರೆ ಕಾಮಾಲೆ ಕಡಿಮೆಯಾಗುತ್ತದೆ.
ಇನ್ನು ಎಲ್ಲರಿಗಿಂತಲೂ ಮಧುಮೇಹ ರೋಗಿಗಳಿಗಾದರೆ ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ. ಇದನ್ನು ಕಾಯಿ ರೂಪದಲ್ಲಾದರೂ, ಪಲ್ಯ, ಅಥವಾ ಚಟ್ನಿ ರೂಪದಲ್ಲಿ, ಜ್ಯೂಸ್ ಮಾಡಿಕೊಂಡು ಕುಡಿದರೂ ಮಧುಮೇಹವನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲಾ ರೋಗಗಳು ಹೀರೇಕಾಯಿಯಿಂದಲೇ ಸಾಧ್ಯವಾಗುತ್ತದೆ ಎಂದರೆ ಯಾರು ತಾನೆ ಹೀರೇಕಾಯಿ ತಿನ್ನಲ್ಲ ಹೇಳಿ. ಈಗ ಹೆಚ್ಚಾಗಿ ಸಿಗುವ ತರಕಾರಿ ಇದು. ಎಲ್ಲಾ ಕಾಯಿಲೆಗಳಿಗೂ ಇದು ಉತ್ತಮ ಔಷಧಿ ಇದ್ದಂತೆ. ಇಂದೇ ಹೀರೇಕಾಯಿ ತಿನ್ನುವುದನ್ನು ಶುರುವಚ್ಚಿಕೊಳ್ಳಿ.

Comments are closed.