ಮುಂಬೈ

ಏಳು ದಿನಗಳ ನಷ್ಟಕ್ಕೆ ಬ್ರೇಕ್‌; ಸೆನ್ಸೆಕ್ಸ್‌ 330 ಅಂಕ ಜಂಪ್‌

Pinterest LinkedIn Tumblr


ಮುಂಬಯಿ : ಕಳೆದ ಏಳು ದಿನಗಳಿಂದ ನಷ್ಟದ ಹಾದಿಯಲ್ಲಿ ಸಾಗಿ ಬಂದಿರುವ ಮುಂಬಯಿ ಶೇರು ಪೇಟೆಗೆ ಕೊನೆಗೂ ಬ್ರೇಕ್‌ ಬಿದ್ದಿದೆ. ಇಂದು ಗುರುವಾರದ ವಹಿವಾಟನ್ನು ಸೆನ್ಸೆಕ್ಸ್‌ 330.45 ಅಂಕಗಳ ಜಿಗಿತದೊಂದಿಗೆ 34,413.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 100.15 ಅಂಕಗಳ ಜಿಗಿತವನ್ನು ಸಾಧಿಸಿ ದಿನದ ವಹಿವಾಟನ್ನು 10,479.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ರಿಲೀಫ್ ರಾಲಿಗೆ ಕಾರಣವಾದ ಹೂಡಿಕೆದಾರರು ಮತ್ತು ವಹಿವಾಟುದಾರರು ಮೌಲ್ಯಯುತ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡರು. ಮೇಲಾಗಿ ಏಶ್ಯನ್‌ ಶೇರು ಪೇಟೆಯಲ್ಲಿ ಇಂದು ಉತ್ತಮ ತೇಜಿ ಕಂಡು ಬಂದಿತ್ತು.

ಸೆನ್ಸೆಕ್ಸ್‌ ಕಳೆದ ಏಳು ದಿನಗಳ ನಷ್ಟದ ವಹಿವಾಟಿನಲ್ಲಿ ಒಟ್ಟು 2,200.54 ಅಂಕಗಳ ನಷ್ಟವನ್ನು ಕಂಡಿತ್ತು.

ಮುಂಬಯಿ ಶೇರು ಪೇಟೆಯಲ್ಲಿಂದು 2,930 ಶೇರುಗಳು ವಹಿವಾಟಿಗೆ ಒಳಪಟ್ಟವು; 2,172 ಶೇರುಗಳ ಮುನ್ನಡೆ ಸಾಧಿಸಿದವು; 640 ಶೇರುಗಳ ಹಿನ್ನಡೆಗೆ ಗುರಿಯಾದವು; 118 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

-ಉದಯವಾಣಿ

Comments are closed.