ಮನೋರಂಜನೆ

ನಟಿ ಶಬಾನಾ ಆಜ್ಮಿ ಗೆ ಮಲೇಶ್ಯ ಪ್ರಧಾನಿಯಿಂದ ಸಮ್ಮಾನ

Pinterest LinkedIn Tumblr


ಮುಂಬಯಿ: ಹಿರಿಯ ಪ್ರಸಿದ್ಧ ಬಾಲಿವುಡ್‌ ನ‌ಟಿ ಶಬಾನಾ ಆಜ್ಮಿ ಅವರೀಗ ಮಲೇಶ್ಯ ರಾಜಧಾನಿ ಕೌಲಾಲಂಪುರಕ್ಕೆ ಪಯಣಿಸುತ್ತಿದ್ದು ಅಲ್ಲಿ ಔದ್ಯಮಿಕ ಶೃಂಗವೊಂದರಲ್ಲಿ ಪ್ರಧಾನಿ ನಜೀಬ್‌ ರಜಾಕ್‌ ಅವರಿಂದ ಗೌರವವನ್ನು ಸ್ವೀಕರಿಸಲಿದ್ದಾರೆ.

67 ವರ್ಷ ಪ್ರಾಯದ ನಟಿ ಆಜ್ಮಿ ಅವರು ಟ್ವಿಟರ್‌ ಮೂಲಕ ತನ್ನ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

“ಕೌಲಾಲಂಪುರದಲ್ಲಿ ನಡೆಯುವ ದಿ ಇಕಾನಮಿಕ್‌ ಟೈಮ್ಸ್‌ ಏಶ್ಯನ್‌ ಬ್ಯುಸಿನೆಸ್‌ ಲೀಡರ್‌ಸ್‌ ಶೃಂಗದಲ್ಲಿ
ಭಾಗವಹಿಸಲು ಹೋಗುತ್ತಿದ್ದೇನೆ; ಅಲ್ಲಿ ಮಲೇಶ್ಯ ಪ್ರಧಾನಿಯಿಂದ ಸಮ್ಮಾನಿತಳಾಗಲಿದ್ದೇನೆ’ ಎಂದು ಆಜ್ಮಿ ಹೇಳಿದ್ದಾರೆ.

ಮಲೇಶ್ಯ ಔದ್ಯಮಿಕ ನಾಯಕರ ಶೃಂಗವು ನಾಳೆ ಗುರುವಾರ ಮುಗಿಯಲಿದೆ.

-ಉದಯವಾಣಿ

Comments are closed.