ಮುಂಬೈ

ಪ್ರೀತಿ ನಿರಾಕರಿಸಿದ ಯುವತಿಗೆ ತನ್ನ ಮನೆಯಲ್ಲೇ ಪೊಲೀಸರೆದುರೇ ಚಾಕುವಿನಿಂದ ಇರಿದ ಯುವಕ

Pinterest LinkedIn Tumblr

21

ಮುಂಬೈ: ಪ್ರೀತಿ ನಿರಾಕರಿಸಿದ ಕಾರಣಕ್ಕೆ 20 ವರ್ಷದ ಯುವಕನೊಬ್ಬ ಯುವತಿಗೆ ತನ್ನ ಮನೆಯಲ್ಲೇ ಚಾಕುವಿನಿಂದ ಇರಿದ ಘಟನೆ ಮುಂಬೈನಲ್ಲಿ ನಡೆದಿದೆ.

ಇಲ್ಲಿನ ಮೀರಾಪುರ್ ರೋಡ್ ನಿವಾಸಿಯಾದ ಮನೀಷ್ ಗುಪ್ತಾ ಈ ಕೃತ್ಯವೆಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಾಕು ಇರಿತಕ್ಕೊಳಗಾದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೀರಾ ರೋಡ್‍ನ ನ್ಯೂ ಗೋಲ್ಡನ್ ನೆಸ್ಟ್‍ನಲ್ಲಿ ಮನೀಷ್ ವಾಸವಿದ್ದ. ಈತನ ಪಕ್ಕದಮನೆಯಲ್ಲಿ ಯುವತಿಯ ಸಂಬಂಧಿಕರಿದ್ದ ಕಾರಣ ಆಕೆ ಅಲ್ಲಿಗೆ ಬಂದುಹೋಗುತ್ತಿದ್ದಾಗ ಮನಿಷ್‍ನ ಪರಿಚಯವಾಗಿ ಸ್ನೇಹ ಬೆಳೆದಿತ್ತು. ನಂತರ ಮನೀಷ್ ಆಕೆಯನ್ನು ಪ್ರೇಮಿಸಲು ಶುರು ಮಾಡಿದ್ದ. ಆಕೆ ಕೂಡ ತನ್ನನ್ನು ಇಷ್ಟಪಡುತ್ತಿದ್ದಾಳೆಂದು ಭಾವಿಸಿದ್ದ. ಮನೀಷ್ ತನ್ನ ಪ್ರೀತಿಯನ್ನು ಯುವತಿಯ ಬಳಿ ಹೇಳಿಕೊಂಡಾಗ ಆಕೆ ನಾವು ಕೇವಲ ಫ್ರೆಂಡ್ಸ್ ಅಷ್ಟೆ ಎಂದು ಹೇಳಿ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರೆದುರೇ ಇರಿದ: ಯುವತಿ ಮನೀಷ್‍ನ ಪ್ರೀತಿಯನ್ನ ಸಾಕಷ್ಟು ಬಾರಿ ನಿರಾಕರಿಸಿದ್ದಳು. ಆತನ ಕಿರುಕುಳ ಹೆಚ್ಚಾದಾಗ ತನ್ನ ಮನೆಯಲ್ಲಿ ವಿಷಯ ತಿಳಿಸಿದ್ದಳು. ಇದೇ ಕಾರಣಕ್ಕೆ ಯುವತಿಯ ಪೋಷಕರು ಮನೀಷ್‍ಗೆ ಬುದ್ಧಿ ಹೇಳಲು ಆತನ ಮನೆಗೆ ಬಂದಿದ್ದರು. ಈ ವೇಳೆ ಆತ ಯುವತಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಬೇಕು ಎಂದಿದ್ದ. ಹೀಗಾಗಿ ಯುವತಿಯ ಪೋಷಕರು ಬೇರೊಂದು ರೂಮಿನಲ್ಲಿದ್ದ ವೇಳೆ ಆತ ಕೋಪಗೊಂಡು ಆಕೆಯ ತಲೆ, ಕೈ ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.