ಮುಂಬೈ: ನೋಟು ಅಮಾನ್ಯದ ಬಳಿದ ಕಂಪೆನಿ ಉತ್ಪನ್ನಗಳ ಮಾರಾಟದಲ್ಲಿ ಶೇ.50 ಇಳಿಕೆಯಾಗಿದ್ದು, ತೈವಾನ್ ಮೂಲದ ತಯಾರಿಕಾ ಕಂಪೆನಿ ‘ಫಾಕ್ಸ್ ಕಾನ್’ ತನ್ನ ಕಾರ್ಖಾನೆಯ 1700 ಉದ್ಯೋಗಿಗಳಿಗೆ ಸಂಬಳ ಸಹಿತ ಎರಡು ವಾರಗಳ ರಜೆ ಘೋಷಿಸಿದೆ ಎಂದು ಆಂಗ್ಲ ಸಂಚಿಕೆ ವರದಿ ಮಾಡಿದೆ.
ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ಘೋಷಣೆಯಿಂದ ಮೊಬೈಲ್ ಕಂಪೆನಿಗೆ ಹೊಡೆತ ಬಿದ್ದಿದ್ದು, ರು. ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ದೊರಕುತ್ತಿದ್ದು, ಕೇವಲ ನಗದು ಪಾವತಿ ಇವರ ವ್ಯವಹಾರದ ಪ್ರಮುಖ ಅಂಗವಾಗಿದೆ. ತಿಂಗಳ ಮಾರಾಟವು 175 ರಿಂದ 200 ಕೋಟಿಯಷ್ಟು ಕುಸಿದಿತ್ತು.
ಕ್ಷಿಯೋಮಿ, ಒಪ್ಪೊ ಮತ್ತು ಗಿಯೋನಿ ಹಾಗೂ ಲಾವಾ, ಇಂಟೆಕ್ಸ್, ಕಾರ್ಬನ್ ನಂದಿಗೆ ಮೈಕ್ರೋಮೆಜ್ ಗಳ ಶೇ.50 ರಷ್ಟು ಬಿಡಿ ಭಾಗಗಳನ್ನು ಪೂರೈಸುತ್ತಿದೆ. ಆಂಧ್ರದಲ್ಲಿ ಕಂಪೆನಿಯು ನಾಲ್ಕು ತಯಾರಿಕಾ ಘಟಕಗಳನ್ನು ಸ್ಥಾಪಿಸಿದ್ದು, ಇವುಗಳ ತಿಂಗಳ ಉತ್ಪಾದನಾ ಸಾಮರ್ಥ್ಯ 2.5 ಮಿಲಿಯನ್ನಿಂದ 1.2 ಮಿಲಿಯನ್ ಗೆ ಇಳಿದಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿ ತಿಳಿಸಿದರು.